Publish Date: Sun, 01 Feb 2026 (11:19 IST)
Updated Date: Sun, 01 Feb 2026 (11:21 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2026 ರನ್ನು ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಯುವ ಶಕ್ತಿ ಕೇಂದ್ರೀಕೃತ ಬಜೆಟ್ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದ್ದಾರೆ.
ನಾವು ಶೇ.7 ರಷ್ಟು ಅಭಿವೃದ್ಧಿ ಹೊಂದಿದ್ದೇವೆ. ಜಾಗತಿಕ ಮಾರುಕಟ್ಟೆಯೊಂದಿಗೆ ಪೈಪೋಟಿ ನೀಡುತ್ತಿದ್ದೇವೆ. ನಾವು ಜಗತ್ತಿನ ನಂ.1 ಆರ್ಥಿಕ ಶಕ್ತಿಯಾಗಿ ಬೆಳೆಯುವ ಗುರಿ ಹೊಂದಿದ್ದೇವೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಹಲವು ಅನಿಶ್ಚಿತತೆಗಳ ನಡುವೆಯೂ ನಾವು ಆರ್ಥಿಕ ಸ್ಥಿರತೆ ಕಾಯ್ದುಕೊಂಡಿದ್ದೇವೆ ಎಂದಿದ್ದಾರೆ.
10 ಸಾವಿರ ಕೋಟಿ ರೂ ವೆಚ್ಚದಲ್ಲಿ ಬಯೋಫಾರ್ಮ್ ಇಂಡಸ್ಟ್ರಿ ಸ್ಥಾಪಿಸಲಿದ್ದೇವೆ. ಕೇರಳ, ತಮಿಳುನಾಡು, ಆಂಧ್ರದಲ್ಲಿ ಅಪರೂಪದ ಖನಿಜಾಂಶ ಕಾರಿಡಾರ್ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.