Daily Horoscope

Select Your Language

Notifications

webdunia
webdunia
webdunia
webdunia

ಬಜೆಟ್ ಆದ ತಕ್ಷಣವೇ ಪ್ರಧಾನಿ ಮೋದಿ ಇಂದು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ

PM Modi
ನವದೆಹಲಿ: ಸಂಸತ್ ನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಅದಾದ ತಕ್ಷಣವೇ ಪ್ರಧಾನಿ ಮೋದಿ ಈ ಒಂದು ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಲಿದ್ದಾರೆ.

ಸಂಸತ್ ನಲ್ಲಿ ಇದೇ ಮೊದಲ ಬಾರಿ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ. ಫೆಬ್ರವರಿ 1 ರಂದು ಬಜೆಟ್ ಮಂಡಿಸುವ ಸಂಪ್ರದಾಯ ಮುರಿಯದಿರಲು ಈ ಬಾರಿ ಭಾನುವಾರವಾದರೂ ಬಜೆಟ್ ಮಂಡನೆಯಾಗುತ್ತಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಪ್ರಧಾನಿ ಮೋದಿ ಸಂಸತ್ ನಲ್ಲಿರಲಿದ್ದಾರೆ. ಅದಾದ ಬಳಿಕ ಅವರು ತುರ್ತಾಗಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಲಿದ್ದಾರೆ. ಅದಕ್ಕೆ ಒಂದು ಕಾರಣವೂ ಇದೆ.

ಪಂಜಾಬ್ ನಲ್ಲಿ ಇಂದು ಗುರು ರವಿದಾಸ್ ಜಯಂತಿ ಅಂಗವಾಗಿ ದೇರಾ ಸಚ್ಕಾನಂದ್ ಗೆ ಮೋದಿ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಪದ್ಮ ಶ್ರೀ, ಸಂತ ನಿರಂಜನ ದಾಸ್ ಅವರನ್ನು ಭೇಟಿಯಾಗಲಿದ್ದು ಗುರು ರವಿದಾಸ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಗುರು ರವಿದಾಸ್ ಜಯಂತಿ ಪ್ರಯುಕ್ತ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Union Budget 2026: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಉಟ್ಟ ಸೀರೆಗೂ ಇದೆ ವಿಶೇಷತೆ