Publish Date: Sat, 31 Jan 2026 (10:13 IST)
Updated Date: Sat, 31 Jan 2026 (10:15 IST)
ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.
ಕಾನ್ಫಿಡೆನ್ಸ್ ಗ್ರೂಪ್ ಮುಖ್ಯಸ್ಥ, ಉದ್ಯಮಿ ಸಿಜೆ ರಾಯ್ ನಿನ್ನೆ ಐಟಿ ದಾಳಿ ಬೆನ್ನಲ್ಲೇ ಕಚೇರಿಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಅವರ ಆತ್ಮಹತ್ಯೆ ಬೆನ್ನಲ್ಲೇ ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಇದರ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು.
ರಾಜ್ಯದಲ್ಲಿ ಇಂದು ಐಟಿ ದಾಳಿ ಕಿರುಕುಳದಿಂದ ಈ ರೀತಿ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ಮಾಡಲಿದೆ. ಯಾಕೆಂದರೆ ಹಿಂದೆ ಕೂಡಾ ಇಂತಹ ಘಟನೆಗಳು ನಡೆದಿವೆ. ಕೇರಳದಿಂದ ತಂಡ ಬಂದಿತ್ತು ಎಂದು ಕೇಳಲ್ಪಟ್ಟೆ. ನಮಗೆ ಹೈಕಮಾಂಡ್ ನಿಂದಲೂ ವರದಿ ಕೇಳಿದ್ದಾರೆ. ಇದರ ಬಗ್ಗೆ ನಾವು ತನಿಖೆ ಮಾಡಿ ಇದರ ಹಿಂದೆ ಏನು ಸತ್ಯವಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ.
ಐಟಿ ದಾಳಿ ಬಗ್ಗೆ ನಾನು ಮಾತನಾಡಿದ್ರೆ ಅದು ರಾಜಕೀಯ ಆಗುತ್ತೆ. ಇದನ್ನು ನಾವು ಮಾತನಾಡಿದ್ರೆ ಸರಿಯಿರಲಿಲ್ಲ. ಈ ರೀತಿ ಕಿರುಕುಳ ಹಿಂದೆಯೂ ಆಗಿದೆ. ಇದರ ಬಗ್ಗೆ ವರದಿ ಬಂದ ನಂತರ ಮಾತನಾಡುತ್ತೇವೆ ಎಂದಿದ್ದಾರೆ ಡಿಕೆ ಶಿವಕುಮಾರ್.