Select Your Language

Notifications

webdunia
webdunia
webdunia
webdunia

ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ರಾಜಕೀಯಕ್ಕೆ ಬನ್ನಿ ಎಂದು ಡಿಕೆ ಶಿವಕುಮಾರ್ ಕರೆದಾಗ ಏನಾಯ್ತು

Ashwini Puneeth Rajkumar
ಬೆಂಗಳೂರು: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ರಾಜಕೀಯಕ್ಕೆ ಬನ್ನಿ ಎಂದು ಡಿಕೆ ಶಿವಕುಮಾರ್ ಕರೆದಾಗ ಏನಾಯ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.

ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ವೇಳೆ ಅವರು ಪುನೀತ್ ಜೊತೆಗಿನ ಸ್ನೇಹ ಮತ್ತು ಅವರ ಪತ್ನಿಯನ್ನು ರಾಜಕೀಯಕ್ಕೆ ಕರೆದ ಕ್ಷಣವನ್ನು ಸ್ಮರಿಸಿದ್ದರು.

‘ಪುನೀತ್ ನನಗೆ ಉತ್ತಮ ಸ್ನೇಹಿತರಾಗಿದ್ದರು. ನಮ್ಮ ಮನೆ ಪಕ್ಕದಲ್ಲೇ ಅವರ ಮನೆಯಿತ್ತು. ಚಿಕ್ಕವಯಸ್ಸಿಗೇ ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು. ಅವರನ್ನು ರಾಜಕೀಯಕ್ಕೆ ಬನ್ನಿ ಎಂದು ಕರೆಯಲು ಪ್ರಯತ್ನಿಸಿದೆ. ಆದರೆ ಅವರು ಒಪ್ಪಲಿಲ್ಲ.

ಅವರ ಪತ್ನಿ ಅಶ್ವಿನಿಯವರನ್ನೂ ಕರೆದೆ. ಆದರೆ ಅವರು ತಮ್ಮ ಗಂಡನ ಹಾದಿಯಲ್ಲೇ ಹೋಗುತ್ತೇನೆ. ನಮಗೆ ರಾಜಕೀಯ ಎಲ್ಲಾ ಬೇಡ ಎಂದು ಬಿಟ್ಟರು’ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ದೊಡ್ಮನೆಯಿಂದ ಗೀತಾ ಶಿವರಾಜ್ ಕುಮಾರ್ ಬಿಟ್ಟರೆ ಬೇರೆ ಎಲ್ಲರೂ ರಾಜಕೀಯದಿಂದ ದೂರವೇ ಉಳಿದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ, ಪತಿ ಮೇಲೆ ಹಲ್ಲೆ