Publish Date: Mon, 19 Jan 2026 (10:19 IST)
Updated Date: Mon, 19 Jan 2026 (10:23 IST)
ಬೆಂಗಳೂರು: ರಾಜ್ಯ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಲು ದೆಹಲಿಯಲ್ಲಿ ಎರಡು ದಿನ ಬೀಡುಬಿಟ್ಟಿದ್ದರೂ ಡಿಕೆ ಶಿವಕುಮಾರ್ ಗೆ ಹೀಗೇಕಾಯ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಅವರ ಬೆಂಬಲಿಗರು.
ಡಿಕೆ ಶಿವಕುಮಾರ್ ಮೊನ್ನೆಯೇ ದೆಹಲಿಗೆ ತೆರಳಿದ್ದರು. ಅಲ್ಲಿಯೇ ಎರಡು ದಿನ ರಾಹುಲ್ ಗಾಂಧಿ ಭೇಟಿಗಾಗಿ ಠಿಕಾಣಿ ಹೂಡಿದ್ದರು. ರಾಹುಲ್ ಗಾಂಧಿ ಭೇಟಿಯಾಗಿದ್ದರೂ ಇದು ಅಸ್ಸಾಂ ಚುನಾವಣೆ ವಿಚಾರವಾಗಿ ನಡೆದ ಸಭೆಯಾಗಿತ್ತು. ಇದರ ಹೊರತಾಗಿ ಡಿಕೆಶಿಗೆ ರಾಹುಲ್ ಗಾಂಧಿ ಅಪಾಯಿಂಟ್ ಮೆಂಟ್ ಸಿಗಲೇ ಇಲ್ಲ ಎನ್ನಲಾಗುತ್ತಿದೆ.
ಆದರೆ ದೆಹಲಿಯಲ್ಲಿ ರಾಹುಲ್ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಗೆ ಕೇಳಿದಾಗ ನಾನು ಸರ್ಕಾರದ ಕೆಲಸ, ಪಕ್ಷದ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದೀನಾ ಇಲ್ವಾ ಎಂದು ಮಾಧ್ಯಮಗಳ ಮುಂದೆ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ.
ಆದರೆ ಡಿಕೆ ಶಿವಕುಮಾರ್ ಅಂದುಕೊಂಡಂತೆ ದೆಹಲಿ ಪ್ರವಾಸ ಸಕ್ಸಸ್ ಆಗಿಲ್ಲ ಎನ್ನಲಾಗಿದೆ. ಸ್ವತಃ ರಾಹುಲ್ ಗಾಂಧಿಯೇ ದೆಹಲಿಗೆ ಬನ್ನಿ ಚರ್ಚೆ ಮಾಡೋಣ ಎಂದಿದ್ದರೂ ಈ ಬಾರಿಯೂ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಲು ಅವರಿಂದ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದು ಡಿಕೆಶಿ ಬೆಂಬಲಿಗರಿಗೆ ಬೇಸರ ತರಿಸಿದೆ. ಪ್ರತೀ ಬಾರಿಯೂ ಹೀಗೆ ಯಾಕೆ ಆಗುತ್ತಿದೆ ಎಂದು ಪ್ರಶ್ನಿಸುವಂತಾಗಿದೆ.