ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಕೊಂಚ ಮಟ್ಟಿಗೆ ಚಳಿ ಕಡಿಮೆಯಾಗಿತ್ತು. ಆದರೆ ಈ ವಾರದಿಂದ ಚಳಿ ಮತ್ತೆ ಹೆಚ್ಚಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಈ ವಾರದ ಹವಾಮಾನ ವರದಿ ಇಲ್ಲಿದೆ.
ಕಳೆದ ವಾರ ವಾಯು ಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದರೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿತ್ತು. ವಾರಂತ್ಯಕ್ಕೆ ಚಳಿ ಕಡಿಮೆಯಾಗಿ ಬಿಸಿಲು ಕಂಡುಬಂದಿತ್ತು.
ಆದರೆ ಈ ವಾರ ಮತ್ತೆ ಚಳಿ ಹೆಚ್ಚಾಗಲಿದೆ. ಹಗಲು ಬಿಸಿಲಿನ ವಾತಾವರಣವಿರಲಿದ್ದು ರಾತ್ರಿ ಚಳಿ ತೀವ್ರವಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಮುಂದಿನ ಒಂದು ವಾರ ಕಾಲ ಚಳಿ ತೀವ್ರತೆ ಹೆಚ್ಚಾಗಲಿದ್ದು ಅದಾದ ಬಳಿಕ ಕೊಂಚ ಚಳಿ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 27 ಡಿಗ್ರಿಯಷ್ಟು ಕಂಡುಬರುವುದು. ಕನಿಷ್ಠ ತಾಪಮಾನ ವಾರದ ಆರಂಭದಲ್ಲಿ 17 ಡಿಗ್ರಿಯಷ್ಟಿರಲಿದ್ದು, ವಾರ ಕಳೆದಂತೆ 16 ಡಿಗ್ರಿಗೆ ಇಳಿಕೆಯಾಗುವ ಸಂಭವವಿದೆ. ವಿಶೇಷವಾಗಿ ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತೀವ್ರ ಚಳಿಯಿರಲಿದೆ.