ಬೆಂಗಳೂರು: ರಾಜ್ಯದಲ್ಲಿ ಈ ವಾರ ಚಳಿ ಮತ್ತು ಮಳೆ ಎರಡೂ ಕಂಡುಬಂದಿದೆ. ವಾರದ ಅಂತ್ಯಕ್ಕೆ ರಾಜ್ಯದ ಹವಾಮಾನ ಹೇಗಿರಲಿದೆ, ಮಳೆಯಿರುತ್ತಾ ಇಲ್ಲಿದೆ ಸಂಪೂರ್ಣ ವಿವರ.
ಈ ವಾರದ ಆರಂಭದಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಧಾರಾಕಾರ ಮಳೆಯಾಗಿತ್ತು. ಉಳಿದಂತೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿತ್ತು.
ಆದರೆ ಈಗ ವಾಯುಭಾರ ಕುಸಿತದ ಪರಿಣಾಮ ತಗ್ಗಿದೆ. ಆದರೆ ವಾರದ ಅಂತ್ಯಕ್ಕೆ ಚಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಈ ವಾರದ ಅಂತ್ಯಕ್ಕೆ ಎಲ್ಲೂ ಮಳೆಯ ಸೂಚನೆಯಿಲ್ಲ. ಜೊತೆಗೆ ಕನಿಷ್ಠ ತಾಪಮಾನದಲ್ಲೂ ಕೊಂಚ ಸುಧಾರಣೆಯಾಗಲಿದೆ.
ಈ ವಾರದ ಅಂತ್ಯಕ್ಕೆ ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 28 ಡಿಗ್ರಿಯಷ್ಟಿರಲಿದೆ. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರುವುದು. ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿರಲಿದೆ. ಕೊಡಗು, ಚಿಕ್ಕಮಗಳೂರು ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಕನಿಷ್ಠ ತಾಪಮಾನ 16 ಡಿಗ್ರಿಯ ಆಸುಪಾಸು ಕಂಡುಬರಲಿದೆ.