Publish Date: Thu, 15 Jan 2026 (11:34 IST)
Updated Date: Thu, 15 Jan 2026 (11:37 IST)
ರಾಜ್ಯದ ವಿವಿಧ ಭಾಗಗಳಲ್ಲಿ ಚಳಿ ಪ್ರಮಾಣ ಸ್ವಲ್ಪ ಮಟ್ಟಿಗೆ ಇಂದು ಕಡಿಮೆಯಾಗಿದ್ದು, ಬಹುತೇಕ ಭಾಗಗಳಲ್ಲಿ ಒಣಹವೆ ಇಂದು ಮುಂದುವರಿದಿದೆ. ಇನ್ನೂ ರಾಜ್ಯದ ಹಲವೆಡೆ ಕಳೆದ 24 ಗಂಟೆಯ ಅವಧಿಯಲ್ಲಿ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆ ಆಗಿದೆ.
ರಾಜ್ಯದ ವಿವಿಧ ಭಾಗದಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆಯಾದರೂ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯದಲ್ಲಿ 5 ದಿನ ಮಹತ್ವದ ಬದಲಾವಣೆಯಿಲ್ಲ: ಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಬಹುತೇಕ ಒಣಹವೆ ಇರಲಿದೆ. ಅದಲ್ಲದೆ ಮುಂದಿನ 5 ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನೂ ಸಿಲಿಕಾನ್ ಸಿಟಿ ಹವಾಮಾನ ಹೇಗಿರಲಿದೆ ಗೊತ್ತಾ: ಕಳೆದ ಮೂರು ದಿನಗಳಿಂದ ಚಳಿ ಪ್ರಮಾಣ ತುಸು ಇಳಿಕೆಯಾಗಿದ್ದು, ಕಳೆದ 15 ದಿನಗಳಿಂದಲೂ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ ಇತ್ತು. ಇನ್ನು ಮುಂದಿನ 24 ಗಂಟೆ ಹಾಗೂ 48 ಗಂಟೆಯ ಅವಧಿಯಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.