Publish Date: Fri, 16 Jan 2026 (09:29 IST)
Updated Date: Fri, 16 Jan 2026 (09:31 IST)
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಇಂದಿನಿಂದ ಅವರು ದೆಹಲಿ ಪ್ರವಾಸ ಮಾಡುತ್ತಿದ್ದಾರೆ.
ತಮಿಳುನಾಡಿಗೆ ತೆರಳುವ ಮಾರ್ಗದಲ್ಲಿ ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆ ವಿಚಾರ ಇಲ್ಲಿ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ಸಂದೇಶ ನೀಡಿದ್ದರು ಎನ್ನಲಾಗಿತ್ತು. ಅದರಂತೆ ಡಿಕೆಶಿ ಮತ್ತು ಸಿದ್ದರಾಮಯ್ಯ ಜನವರಿ 16 ಕ್ಕೆ ದೆಹಲಿ ಪ್ರವಾಸ ಮಾಡಲಿದ್ದಾರೆ ಎನ್ನಲಾಗಿತ್ತು.
ಇದೀಗ ಇಂದಿನಿಂದ ಎರಡು ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಟಾಪ್ ನಾಯಕರ ಭೇಟಿಯಾಗಿ ಅವರು ಚರ್ಚೆ ನಡೆಸಲಿದ್ದಾರೆ. ಈ ಭೇಟಿ ಬಗ್ಗೆ ಈಗ ಎಲ್ಲರ ಕುತೂಹಲವಿದೆ.
ಆದರೆ ಮಾಧ್ಯಮಗಳ ಮುಂದೆ ಇದು ಸಾಮಾನ್ಯ ಭೇಟಿ. ರಾಹುಲ್ ಗಾಂಧಿಯನ್ನು ನಾನು ಇದೇ ಮೊದಲು ಭೇಟಿ ಮಾಡುತ್ತಿಲ್ಲ. ಈ ಹಿಂದೆಯೂ ಭೇಟಿ ಮಾಡಿದ್ದೆ ಎಂದು ಡಿಕೆ ಶಿವಕುಮಾರ್ ಸಮಾಯಿಷಿ ನೀಡಿದ್ದಾರೆ. ಆದರೆ ಈ ಭೇಟಿಯ ಹಿಂದೆ ನಾಯಕತ್ವ ಬದಲಾವಣೆಯೇ ಮುಖ್ಯ ಅಜೆಂಡಾ ಎಂಬ ಮಾತು ಕೇಳಿಬರುತ್ತಿದೆ.