Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಜೊತೆ ಏನು ಚರ್ಚೆ ಮಾಡಿದ್ರಿ ಎಂದರೆ ಡಿಕೆ ಶಿವಕುಮಾರ್ ಹೇಳಿದ್ದೇನು

DK Shivakumar
ಬೆಂಗಳೂರು: ನಿನ್ನೆ ಮೈಸೂರಿನಲ್ಲಿ ರಾಹುಲ್ ಗಾಂಧಿ ಜೊತೆ ಏರ್ ಪೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸಿದ್ದರು. ಈ ಮಾತುಕತೆ ಬಗ್ಗೆ ಇಂದು ಮಾಧ್ಯಮಗಳು ಡಿಕೆಶಿಯನ್ನು ಪ್ರಶ್ನೆ ಮಾಡಿದ್ದಾರೆ.

ರಾಹುಲ್ ಗಾಂಧಿ ಜೊತೆ ರಹಸ್ಯವಾಗಿ ಏನು ಮಾತನಾಡಿದ್ರಿ? ಅಧಿಕಾರ ಹಂಚಿಕೆ ಬಗ್ಗೆ ಕೇಳಿದ್ದೀರಾ ಎಂದು ಮಾಧ್ಯಮಗಳು ನೇರವಾಗಿ ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಡಿಕೆಶಿ ‘ನಾನು ಕಾಂಗ್ರೆಸ್ ಅಧ್ಯಕ್ಷ. ಅವರು ನಮ್ಮ ರಾಷ್ಟ್ರೀಯ ನಾಯಕರು. ನಾವು ಭೇಟಿ ಮಾಡೋದು, ಗೌರವ ಕೊಡೋದು, ಔಪಚಾರಿಕವಾಗಿ ಸ್ವಾಗತ ಕೋರುವುದು ಮಾತನಾಡುವುದು ಎಲ್ಲಾ ಸಹಜ. ನಾವು ಏನೆಲ್ಲಾ ಮಾತನಾಡಿದ್ದೇವೆ ಎಂದು ಎಲ್ಲಾ ಪಬ್ಲಿಕ್ ನಲ್ಲಿ ಹೇಳಕ್ಕಾಗುತ್ತಾ?

ಭೇಟಿ ಮಾಡಿದ್ದೀವಿ, ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಿ ಎಂದಿದ್ದಾರೆ. ಮಾಡ್ತಿದ್ದೀವಿ. ನರೇಗಾ ಯೋಜನೆ ಬಗ್ಗೆ ಹೋರಾಟ ಮುಂದುವರಿಸಿಕೊಂಡು ಹೋಗಿ ಎಂದಿದ್ದಾರೆ. ಬಿಜೆಪಿ ಅವಕಾಶವಾದಿ ರಾಜಕಾರಣದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಅಷ್ಟೇ’ ಎಂದಿದ್ದಾರೆ.

ಇನ್ನು ದೆಹಲಿಗೆ ತೆರಳುವ ವಿಚಾರದ ಬಗ್ಗೆಯೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು 16 ಕ್ಕೆ ದೆಹಲಿಗೆ ಹೋಗುತ್ತಿದ್ದೇವೆ. ನಾನು ಯಾವುದನ್ನೂ ಆನ್ ರೆಕಾರ್ಡ್ ಇಟ್ಟುಕೊಳ್ಳಲ್ಲ. ಎಲ್ಲವನ್ನೂ ರೆಕಾರ್ಡ್’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಕುರ್ಚಿ ಕದನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ: ಬಿವೈ ವಿಜಯೇಂದ್ರ