Publish Date: Tue, 13 Jan 2026 (09:37 IST)
Updated Date: Tue, 13 Jan 2026 (09:39 IST)
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ಬೇಟಿ ಮಾಡಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇಂದೇ ಆ ಮಹತ್ವದ ಭೇಟಿ ನಡೆಯಲಿದೆ.
ರಾಹುಲ್ ಗಾಂಧಿ ಇಂದು ತಮಿಳುನಾಡಿಗೆ ತೆರಳುತ್ತಿದ್ದಾರೆ. ತಮಿಳುನಾಡಿಗೆ ಮೈಸೂರು ಮಾರ್ಗವಾಗಿ ತೆರಳಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿ ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇಷ್ಟು ದಿನ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಆಗಾಗ ದೆಹಲಿಗೆ ಹೋದರೂ ಇಬ್ಬರೂ ನಾಯಕರು ಸಫಲರಾಗಲಿಲ್ಲ. ಆದರೆ ಈಗ ರಾಹುಲ್ ಗಾಂಧಿ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವೇಳೆ ಎರಡು ವಿಚಾರಗಳ ಬಗ್ಗೆ ಪ್ರಮುಖವಾಗಿ ರಾಹುಲ್ ಒಪ್ಪಿಗೆ ಪಡೆಯಲಿದ್ದಾರೆ.
ರಾಜ್ಯ ನಾಯಕತ್ವ ಬದಲಾವಣೆ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ರಾಹುಲ್ ಒಪ್ಪಿಗೆ ಪಡೆಯಲಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಸಂಕ್ರಾಂತಿಯೊಳಗೆ ತೀರ್ಮಾನವಾಗಲಿದೆ ಎಂದು ಡಿಕೆಶಿ ಬಣ ಹೇಳುತ್ತಲೇ ಬಂದಿತ್ತು. ಇದೀಗ ಸಂಕ್ರಾಂತಿ ಸಂದರ್ಭದಲ್ಲೇ ರಾಹುಲ್ ಗಾಂಧಿ ಭೇಟಿ ಮಾಡುತ್ತಿರುವುದರಿಂದ ನಾಯಕತ್ವ ವಿಚಾರ ಒಂದು ಹಂತಕ್ಕೆ ಬರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ.