ಕಲಬುರಗಿ: ಕಲಬುರಗಿಯ ಯಡ್ರಾಮಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವೇದಿಕೆ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾತಿನಲ್ಲೇ ತಿವಿದಿದ್ದಾರೆ.
ಡಿಕೆ ಶಿವಕುಮಾರ್ ಮಾತನಾಡುವಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನೋಡಿ ನಾನು ಇಲ್ಲೇ ಹುಟ್ಟುಬೇಕಿತ್ತು ಎನಿಸುತ್ತಿದೆ ಎಂದಿದ್ದರು. ಅವರ ಮಾತಿಗೆ ಟಾಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ ನೀವು ಇಲ್ಲಿ ಹುಟ್ಟೋದೂ ಬೇಡ ನಾವು ಅಲ್ಲಿ ಹುಟ್ಟೋದೂ ಬೇಡ ಎಂದಿದ್ದಾರೆ.
ಶಿವಕುಮಾರ್ ಅವರೇ, ನೀವು ಇಲ್ಲಿ ಹುಟ್ಟೋದೂ ಬೇಡ, ನಾವು ಅಲ್ಲಿ ಹುಟ್ಟೋದೂ ಬೇಡ. ಲಂಡನ್ ಕನಸುಬೇಡ. ಸಿದ್ದರಾಮಯ್ಯನವರ ಮೈಸೂರು ಹೇಗಿದೆ? ನಿಮ್ಮ ಕನಕಪುರ ಕ್ಷೇತ್ರ ಹೇಗಿದೆ? ಅದೇ ರೀತಿ ನಮ್ಮ ಭಾಗವನ್ನೂ ಅಭಿವೃದ್ಧಿ ಮಾಡಿ ಸಾಕು. ಬಫೆಯಲ್ಲಿ ಊಟ ಮಾಡುವವರಿಗೆ ಎಲ್ಲವೂ ಸಿಗುತ್ತದೆ. ಆದರೆ ಪಂಕ್ತಿಯಲ್ಲಿ ಕೂತವರಿಗೆ ಏನೂ ಸಿಗಲ್ಲ. ನಮ್ಮ ಸ್ಥಿತಿ ಪಂಕ್ತಿಯಲ್ಲಿ ಕೂತು ಊಟ ಮಾಡುವ ಹಾಗಾಗಿದೆ ಎಂದಿದ್ದಾರೆ.