ಬೆಂಗಳೂರು: ಏರ್ ಪೋರ್ಟ್ ನಲ್ಲಿ ಹೈಕಮಾಂಡ್ ಮುಂದೆ ಮಂಡಿಯೂರಿದ್ರೂ ಪ್ರಯತ್ನಗಳೆಲ್ಲಾ ವಿಫಲವಾಯ್ತು ಎಂದು ಡಿಕೆಶಿಯೇ ಒಪ್ಪಿಕೊಂಡ್ರು ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.
ಮೈಸೂರಿನಲ್ಲಿ ನಿನ್ನೆ ರಾಹುಲ್ ಗಾಂಧಿ ಜೊತೆ ಏರ್ ಪೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಗಹನವಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಯತ್ನಗಳು ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಸಂದೇಶ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ವ್ಯಂಗ್ಯ ಮಾಡಿದೆ.
ಏರ್ ಪೋರ್ಟ್ ಮೀಟಿಂಗ್ ಬಳಿಕ ಹೈಕಮಾಂಡ್ ಮುಂದೆ ಮಂಡಿಯೂರಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ ಎಂಬುದನ್ನು ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಇದೇ ಪ್ರಯತ್ನವನ್ನು ರಸ್ತೆ ಗುಂಡಿ ಮುಚ್ಚುವುದಕ್ಕೆ, ರಾಜ್ಯದ ಅಭಿವೃದ್ಧಿಗೆ ಬಳಸಿದ್ದರೆ, ಬಹುಶಃ ಕೊಂಚ ಮಟ್ಟಿಗೆ ಕರ್ನಾಟಕದ ಜನತೆಯಾದರೂ ನಿಮ್ಮ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರು. ಈಗಲೂ ಕಾಲ ಮಿಂಚಿ ಹೋಗಿಲ್ಲ, ಸಿಎಂ ಕುರ್ಚಿ ಮೇಲಿನ ಪ್ಯಾರ್, ಮೊಹಬ್ಬತ್,ಇಷ್ಕ್ ಅನ್ನು ಕರ್ನಾಟಕದ ಅಭಿವೃದ್ಧಿ ಮೇಲೆ ಕೇಂದ್ರಿಕರಿಸಿ ಎಂದು ಟಾಂಗ್ ಕೊಟ್ಟಿದೆ.