Daily Horoscope

Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ

Siddaramaiah
ಮೈಸೂರು: ತಮಿಳುನಾಡಿಗೆ ತೆರಳುವ ಮಾರ್ಗದಲ್ಲಿ ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.

ಇಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೇ ನಾಯಕತ್ವ ಬದಲಾವಣೆ ಬಗ್ಗೆ ಏನು ತೀರ್ಮಾನವಾಗಬಹುದು ಎಂದು ಎಲ್ಲರೂ ಕುತೂಹಲದಿಂದ ಎದಿರು ನೋಡಿದ್ದರು. ಆದರೆ ರಾಹುಲ್ ಕೆಲವೇ ನಿಮಿಷ ಮೈಸೂರಿನಲ್ಲಿದ್ದು ವಾಪಸ್ ಆಗಿದ್ದರು.

ಇದರ ನಡುವೆ ನಾಯಕತ್ವ  ಬದಲಾವಣೆ ಬಗ್ಗೆ ಏನಾದರೂ ಚರ್ಚೆಯಾಗಿದೆಯೇ ಎಂದು ಮಾಧ್ಯಮಗಳು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ನಮ್ಮಲ್ಲಿ ಯಾವ ಗೊಂದಲ ಇಲ್ಲ, ಸಮಸ್ಯೆಯೂ ಇಲ್ಲ. ಊಹಾಪೋಹದ ಬಗ್ಗೆ ಚರ್ಚೆ ಮಾಡುತ್ತಿರುವವರು ಮಾಧ್ಯಮದವರು. ಕೆಲವು ಎಂಎಲ್ಎಗಳು ಏನೂ ಗೊತ್ತಿಲ್ಲದೇ ಏನೋ ಚರ್ಚೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಬೇಕಾಗಿರುವುದು ನಾನು ಮತ್ತು ಡಿಕೆ ಶಿವಕುಮಾರ್. ನಾನಾಗಲೀ, ಡಿಕೆ ಶಿವಕುಮಾರ್ ಆಗಲೀ ಇದರ ಬಗ್ಗೆ ಮಾತನಾಡಿದ್ದೇವಾ? ಏನೇ ತೀರ್ಮಾನಗಳಿದ್ದರೂ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

10 ನಿಮಿಷಗಳ ಡೆಲಿವರಿ ಗಡುವಿಗೆ ಇನ್ಮುಂದೆ ಬ್ರೇಕ್‌, ಯಾಕೆ ಗೊತ್ತಾ