ಬೆಂಗಳೂರು: ಹೈಕಮಾಂಡ್ ಭೇಟಿಗೆ ದೆಹಲಿಗೆ ಹೋಗಿ ಬಂದಿದ್ದ ಡಿಕೆ ಶಿವಕುಮಾರ್ ದಿಡೀರ್ ಆಗಿ ಒಂದು ತೀರ್ಮಾನ ಕೈಗೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗಿ ಎರಡು ದಿನ ಅಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ ದೆಹಲಿಯಲ್ಲಿ ಏನು ಮಾತುಕತೆಯಾಗಿದೆ, ಅಂದುಕೊಂಡಂತೇ ರಾಹುಲ್ ಗಾಂಧಿ ಭೇಟಿಯಾಗಿ ಮಾತನಾಡಿದ್ದಾರಾ ಎಂಬುದನ್ನು ಅವರು ಖಚಿತವಾಗಿ ಹೇಳಿಲ್ಲ.
ಆದರೆ ದೆಹಲಿ ಭೇಟಿ ಗದ್ದಲದ ನಡುವೆ ಡಿಕೆ ಶಿವಕುಮಾರ್ ದಾವೋಸ್ ನಲ್ಲಿ ನಡೆಯುವ ಆರ್ಥಿಕ ಸಮ್ಮೇಳನದಲ್ಲಿ ಭಾಗಿಯಾಗಲ್ಲ ಎನ್ನಲಾಗಿತ್ತು. ಇದರ ಬಗ್ಗೆ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಭಾರೀ ಟೀಕೆ ಮಾಡಿತ್ತು. ಇದರಿಂದಾಗಿ ಕರ್ನಾಟಕಕ್ಕೆ ದೊಡ್ಡ ಅವಕಾಶ ಕೈತಪ್ಪಿ ಹೋಯ್ತು ಎಂದು ಬಿವೈ ವಿಜಯೇಂದ್ರ ಹೇಳಿದ್ದರು.
ಆದರೆ ಈಗ ದೆಹಲಿಯಿಂದ ಬಂದ ಬಳಿಕ ಡಿಕೆ ಶಿವಕುಮಾರ್ ದಿಡೀರ್ ನಿರ್ಧಾರ ಬದಲಾಯಿಸಿಕೊಂಡಿದ್ದಾರೆ. ದಾವೋಸ್ ಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇಂದೇ ಅವರು ದಾವೋಸ್ ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.