ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜೊತೆಗೆ ಪರೀಕ್ಷಾರ್ಥಿಗಳಾಗಿ ಬರುವ ಶಿಕ್ಷಕರಿಗೂ ಈ ವರ್ಷದಿಂದ ಹೊಸ ರೂಲ್ಸ್ ಜಾರಿಗೆ ಬರಲಿದೆ. ಅದೇನು ಇಲ್ಲಿದೆ ವಿವರ.
ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮೊದಲ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮತ್ತೆ ಇಂತಹ ಪ್ರಮಾದಗಳಾಗದೇ ಇರಲು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ಹೊಸ ರೂಲ್ಸ್ ಜಾರಿಗೆ ತರಲಾಗಿದೆ.
ವಿದ್ಯಾರ್ಥಿಗಳಿಗೆ ಏನು ಸೂಚನೆ?
-ಪರೀಕ್ಷಾ ಸಮಯ ಬದಲಾವಣೆಯಾಗಲಿದೆ. ಇನ್ನು ಮುಂದೆ 10 ಕ್ಕಲ್ಲ 11 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ.
-ವಿದ್ಯಾರ್ಥಿಗಳು 9 ಗಂಟೆಗೆ ಶಾಲೆಗೆ ಬರಬೇಕು.
-ಕೊಠಡಿಗೆ ಪುಸ್ತಕ, ಗೈಡ್ ತರುವಂತಿಲ್ಲ.
-ಮಾಧ್ಯಮದಲ್ಲಿ ಪತ್ರಿಕೆ ವರ್ಗಾವಣೆ ಮಾಡಬಾರದು.
-ಸೋರಿಕೆಯಾದಲ್ಲಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವಾಗುತ್ತದೆ.
-ಸೋರಿಕೆಯಾದರೂ ವಿದ್ಯಾರ್ಥಿಗಳ ಕೈಗೆ ಪ್ರಶ್ನೆ ಪತ್ರಿಕೆ ಸಿಗಬಾರದು.
-ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತ ಮೆಲಷ್ಟೇ ಪ್ರಶ್ನೆ ಪತ್ರಿಕೆ ಡೌನ್ ಲೋಡ್ ಗೆ ಅವಕಾಶ ಸಿಗಲಿದೆ.
ಶಿಕ್ಷಕರಿಗೆ ಏನು ನಿಯಮ?
-ಶಿಕ್ಷಕರಿಗೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ.
-ಪ್ರಶ್ನೆ ಪತ್ರಿಕೆ ಮುದ್ರಣ, ವಿತರಣೆ ಪೂರ್ಣ ಜವಾಬ್ಧಾರಿ ಮುಖ್ಯ ಶಿಕ್ಷಕರದ್ದಾಗಿರುತ್ತದೆ.
-ವಿದ್ಯಾರ್ಥಿಗಳು ತರಗತಿಯಲ್ಲಿ ಬಂದು ಕುಳಿತ ಬಳಿಕವಷ್ಟೇ ಮುಖ್ಯ ಶಿಕ್ಷಕರ ಲಾಗಿನ್ ಗೆ ಪ್ರಶ್ನೆ ಪತ್ರಿಕೆ ಸಿಗಲಿದೆ.
-ಒಂದು ವೇಳೆ ಅನುದಾನಿತ ಶಾಲೆಗಳು ಗೌಪ್ಯತೆ ಕಾಪಾಡದೇ ಇದ್ದಲ್ಲಿ ಶಾಲೆಯ ಮಾನ್ಯತೆಯೇ ರದ್ದಾಗಲಿದೆ.