Select Your Language

Notifications

webdunia
webdunia
webdunia
webdunia

Karnataka SSLC result 2025: ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ, ಎಲ್ಲಿ ವೀಕ್ಷಿಸಬಹುದು ಇಲ್ಲಿದೆ ವಿವರ

Karnataka SSLC result

Krishnaveni K

ಬೆಂಗಳೂರು , ಗುರುವಾರ, 1 ಮೇ 2025 (15:49 IST)
ಬೆಂಗಳೂರು: ಕರ್ನಾಟಕ 2025 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಎಲ್ಲಿ ವೀಕ್ಷಿಸಬೇಕು, ಹೇಗೆ ವೀಕ್ಷಿಸಬೇಕು ಇಲ್ಲಿದೆ ವಿವರ.

2025 ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಲಿದ್ದಾರೆ. ಅದಾದ ಬಳಿಕ ಆನ್ ಲೈನ್ ನಲ್ಲಿ ಫಲಿತಾಂಶ ವೀಕ್ಷಣೆಗೆ ಲಭ್ಯವಿರುತ್ತದೆ.

ನಾಳೆ ಬೆಳಿಗ್ಗೆ 11.30 ಕ್ಕೆ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಲಿದ್ದಾರೆ. ಸುದ್ದಿಗೋಷ್ಠಿ ಬಳಿಕ ಮಧ್ಯಾಹ್ನ 12.30 ರಿಂದ https://karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ವೆಬ್ ಸೈಟ್ ನಲ್ಲಿ ನಿಮ್ಮ ನೋಂದಣಿ ಸಂಖ್ಯೆ, ಹೆಸರು ನಮೂದಿಸಿ ಫಲಿತಾಂಶ ಪಡೆಯಬಹುದಾಗಿದೆ. ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ ಸಿ ಫಲಿತಾಂಶ ವೀಕ್ಷಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು, ಎಲ್‌ಪಿಜಿ ಸಿಲಿಂಡರ್‌ ಸೋರಿಕೆ ದುರಂತ: ಇಬ್ಬರು ಸಜೀವ ದಹನ