ಬೆಂಗಳೂರು: ಇಂದು ಕಾಂಗ್ರೆಸ್ ಮನರೇಗಾ ಉಳಿಸಿ ಹೋರಾಟ ಕೈಗೊಂಡಿತ್ತು. ಈ ವೇಳೆ ಸಿದ್ದರಾಮಯ್ಯ ಮುಂದೆ ಡಿಕೆ ಶಿವಕುಮಾರ್ ಗೆ ಕೆಲವರು ಜೈಕಾರ ಹಾಕಿದ್ದಕ್ಕೆ ಅವರು ಸಿಟ್ಟಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಫ್ರೀಡಂ ಪಾರ್ಕ್ ನಲ್ಲಿ ಇಂದು ಮನರೇಗಾ ಉಳಿಸಿ ಹೋರಾಟ ಸಮಾವೇಶ ನಡೆದಿತ್ತು. ಎಐಸಿಸಿ ನಾಯಕ ರಣದೀಪ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಬಹುತೇಕ ನಾಯಕರು ಈ ಸಮಾವೇಶದ ವೇದಿಕೆಯಲ್ಲಿದ್ದರು.
ಈ ವೇಳೆ ಸಿದ್ದರಾಮಯ್ಯ ಭಾಷಣ ಮಾಡಲು ಮೈಕ್ ಬಳಿ ಬರುತ್ತಿರುವಾಗ ಕೆಲವರು ಡಿಕೆ ಶಿವಕುಮಾರ್ ಗೆ ಜೈಕಾರ ಕೂಗುತ್ತಿದ್ದರು. ಇದರಿಂದ ಸಿದ್ದರಾಮಯ್ಯ ಸಿಟ್ಟಾದರು. ಏಯ್ ಕೂತ್ಕೊಳ್ರೋ.. ಯಾರೋ ಅವರು ಎಂದು ಸಿಟ್ಟಿನಿಂದ ಗದರಿದರು.
ಬಳಿಕ ಉದ್ಘೋಷಕರೂ ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ಸ್ವಲ್ಪ ಹೊತ್ತು ಸೈಲೆಂಟ್ ಆಗಿ ಕೂತುಕೊಂಡು ಕೇಳಿ ಎಂದರು. ಈ ವೇಳೆ ಡಿಕೆ ಶಿವಕುಮಾರ್ ಕೂಡಾ ವೇದಿಕೆಯಲ್ಲೇ ಇದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿವೈರಲ್ ಆಗಿದೆ.