Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿಯಿಂದ ಮತ್ತೆ ಮುಂಬೈ ಪಾಲಿಟಿಕ್ಸ್

webdunia
ಸೋಮವಾರ, 21 ಜೂನ್ 2021 (10:42 IST)
ಬೆಳಗಾವಿ: ರಾಸಲೀಲೆ ಪ್ರಕರಣದಲ್ಲಿ ತಮ್ಮನ್ನು ಯಾರೂ ಬೆಂಬಲಿಸದೇ ಇರುವ ಕಾರಣಕ್ಕೆ ಮತ್ತು ಮತ್ತೆ ತಮಗೆ ಸಚಿವ ಸ್ಥಾನ ನೀಡುವ ಬಗ್ಗೆ ಯಾರೂ ಪರಿಗಣಿಸದೇ ಇರುವುದಕ್ಕೆ ನೊಂದಿರುವ ಶಾಸಕ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.

 

ಕಳೆದ ಬಾರಿ ಮುಂಬೈಗೆ ತೆರಳಿ ತಮ್ಮ ಆಪ್ತ ಶಾಸಕರನ್ನು ಕರೆಸಿಕೊಂಡು ರಾಜೀನಾಮೆ ಕೊಡಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಲು ಅವರೇ ಪ್ರಮುಖ ಕಾರಣರಾಗಿದ್ದರು. ಇದೀಗ ಮತ್ತೆ ಅಸಮಾಧಾನಗೊಂಡು ಮುಂಬೈಗೆ ತೆರಳಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ತಮ್ಮ ವಿರುದ್ಧ ಬಂದಿರುವ ಪ್ರಕರಣ ರದ್ದುಗೊಳಿಸಲು ರಾಜ್ಯ ಸರ್ಕಾರ ಪ್ರಯತ್ನಪಡುತ್ತಿಲ್ಲ. ಅಲ್ಲದೆ, ತಮಗೆ ಮತ್ತೆ ಸಚಿವ ಸ್ಥಾನ ಕೊಡುವ ಬಗ್ಗೆಯೂ ಆಸಕ್ತಿ ತೋರುತ್ತಿಲ್ಲ ಎನ್ನುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಯೋಗ ದಿನಕ್ಕೆ ಭಾರತದ ಕೊಡುಗೆ: ಯೋಗ ಆಪ್ ಲಾಂಚ್