Publish Date: Mon, 21 Jun 2021 (10:30 IST)
Updated Date: Mon, 21 Jun 2021 (10:31 IST)
ನವದೆಹಲಿ: ವಿಶ್ವ ಯೋಗ ದಿನಾಚರಣೆಗಾಗಿ ಭಾರತ ವಿಶ್ವಕ್ಕೆ ಹೊಸ ಆಪ್ ಲಾಂಚ್ ಮಾಡುವ ಮೂಲಕ ಮತ್ತೊಂದು ಕೊಡುಗೆ ನೀಡಿದೆ.
ವಿಶ್ವ ಯೋಗ ದಿನಾಚರಣೆ ಭಾರತದ ಕೊಡುಗೆ. ಇದೀಗ ಯೋಗ ದಿನಾಚರಣೆಯಂದು ಯೋಗದ ಬಗ್ಗೆ ಮಾಹಿತಿ ನೀಡುವ mYoga ಆಪ್ ನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
ಈ ಆಪ್ ವಿಶ್ವದಾದ್ಯಂತ ಜನರಿಗೆ ಲಭ್ಯವಾಗಲಿದೆ. ಇದರಲ್ಲಿ ಯೋಗದ ಕುರಿತಾದ ಮಾಹಿತಿ, ತರಬೇತಿ, ತಜ್ಞರ ಸಲಹೆಗಳನ್ನು ಪಡೆಯಬಹುದು. ಈ ಆಪ್ ನಲ್ಲಿ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ಲಭ್ಯವಾಗಲಿದೆ. ಇದು ಒಂದು ವಿಶ್ವ, ಒಂದು ಆರೋಗ್ಯ ಮಂತ್ರವನ್ನು ಸಾರಿ ಹೇಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.