Select Your Language

Notifications

webdunia
webdunia
webdunia
webdunia

ಅನ್ ಲಾಕ್ 2.0 ಹೊಸ ರೂಲ್ಸ್ ಗಳು ಏನೇನು?

ಅನ್ ಲಾಕ್ 2.0 ಹೊಸ ರೂಲ್ಸ್ ಗಳು ಏನೇನು?
ಬೆಂಗಳೂರು , ಭಾನುವಾರ, 20 ಜೂನ್ 2021 (09:22 IST)
ಬೆಂಗಳೂರು: ನಾಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಲಿದ್ದು, ಹೊಸ ನಿಯಮಗಳು ಪಾಲನೆಯಾಗಲಿದೆ.


ಪಾಸಿಟಿವಿಟಿ ಶೇ.5 ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಜಾರಿಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ 1.0 ರ ನಿಯಮ ಅನ್ವಯವಾಗಲಿದೆ. ಅನ್ ಲಾಕ್ ಇರುವಲ್ಲಿ ಎಲ್ಲಾ ಅಂಗಡಿಮುಂಗಟ್ಟುಗಳನ್ನು ಸಂಜೆ 5 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ.

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಎಸಿ ಆನ್ ಮಾಡದೇ ಶೇ.50 ಗ್ರಾಹಕರಿಗೆ ಅಲ್ಲಿಯೇ ಕುಳಿತು ಆಹಾರ ಸೇವಿಸಲು ಅವಕಾಶ ನೀಡಲಾಗಿದೆ. ಬಸ್, ಮೆಟ್ರೋ ಸಂಚಾರಕ್ಕೂ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲೂ ಶೇ.50 ರಷ್ಟು ನೌಕರರು ಹಾಜರಾಗಬಹುದು.

ಆದರೆ ದೇವಸ್ಥಾನ, ಪ್ರಾರ್ಥನಾ ಮಂದಿರಗಳು, ಸಭೆ, ಸಮಾರಂಭಗಳಿಗೆ, ಥಿಯೇಟರ್ ಗಳಿಗೆ ಜುಲೈ 5 ರವರೆಗೂ ನಿರ್ಬಂಧ ಮುಂದುವರಿಸಲಾಗಿದೆ. ಸಿನಿಮಾ, ಕಿರುತೆರೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶವಿದೆ. ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ಕ್ರೀಡಾಕೂಟ ಆಯೋಜಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಅಹಮ್ಮದ್ ಗೆ ಡಿಕೆಶಿ ವಾರ್ನಿಂಗ್