Publish Date: Fri, 18 Jun 2021 (09:56 IST)
Updated Date: Fri, 18 Jun 2021 (09:58 IST)
ಬೆಂಗಳೂರು: ಕೊನೆಗೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಕಳೆದ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.3 ಕ್ಕಿಳಿದಿದೆ.
ಹೀಗಾಗಿ ಸೋಮವಾರದಿಂದ ಲಾಕ್ ಡೌನ್ ಸಂಪೂರ್ಣ ಮುಕ್ತವಾಗುವುದು ಪಕ್ಕಾ ಆಗಿದೆ. ಗುರುವಾರ ಒಟ್ಟಾರೆ ಸೋಂಕಿತರ ಸಂಖ್ಯೆ 5,983 ಕ್ಕಿಳಿದಿದೆ. 138 ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದಲ್ಲೂ ಸೋಂಕಿತರ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 63,480 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 8 ಲಕ್ಷದೊಳಗೇ ಇದ್ದು, ಕಳೆದ 73 ದಿನಗಳಲ್ಲಿ ಇದು ದಾಖಲೆಯಾಗಿದೆ. ಹೀಗಾಗಿ ಸದ್ಯದ ಮಟ್ಟಿಗೆ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದೇ ಹೇಳಬಹುದು.