Select Your Language

Notifications

webdunia
webdunia
webdunia
webdunia

ಅನ್ ಲಾಕ್ ಜೊತೆಗೆ ನಿರುದ್ಯೋಗ ಪ್ರಮಾಣವೂ ಇಳಿಕೆ

ಅನ್ ಲಾಕ್ ಜೊತೆಗೆ ನಿರುದ್ಯೋಗ ಪ್ರಮಾಣವೂ ಇಳಿಕೆ
ನವದೆಹಲಿ , ಗುರುವಾರ, 17 ಜೂನ್ 2021 (09:21 IST)
ನವದೆಹಲಿ: ದೇಶದಲ್ಲಿ ಕೊರೋನಾ ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್ ಡೌನ್ ಹೇರಿದ್ದವು. ಆದರೆ ಅದೆಲ್ಲವೂ ಈಗ ಮರಳಿ ಅನ್ ಲಾಕ್ ಮಾಡುವುದರತ್ತ ಸಾಗಿದೆ.


ಈ ನಡುವೆ ಅನ್ ಲಾಕ್ ಜಾರಿಯಾಗುತ್ತಿದ್ದಂತೇ ನಿರುದ್ಯೋಗ ಪ್ರಮಾಣವೂ ಇಳಿಕೆಯಾಗುತ್ತಿದೆ. ಲಾಕ್ ಡೌನ್ ನಿಂದಾಗಿ ಹಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗ ಪ್ರಮಾಣ ಭಾರೀ ಏರಿಕೆಯಾಗಿತ್ತು. ಆದರೆ ಈಗ ಅನ್ ಲಾಕ್ ಆಗುತ್ತಿರುವುದರಿಂದ ನಿರುದ್ಯೋಗ ಪ್ರಮಾಣವೂ ಇಳಿಕೆಯಾಗುತ್ತಿದೆ.

ಸಿಎಂಐಇ ವರದಿ ಈ ಸಿಹಿ ಸುದ್ದಿ ನೀಡಿದೆ. ಈ ಮೊದಲು ಶೇ. 13 ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ.9 ಕ್ಕೆ ಇಳಿಕೆಯಾಗಿದೆ. ಇದು ಸಮಾಧಾನಕರ ವಿಚಾರ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆಯಾಗಬಹುದು ಎಂದು ವರದಿ ಭರವಸೆ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಸಚಿವರಿಗೆ ಸೂಚನೆ