Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಹೊಗಳಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ!

ಪ್ರಧಾನಿ ಮೋದಿ ಹೊಗಳಿದ ಕಾಂಗ್ರೆಸ್ ನಾಯಕ ಪಿ ಚಿದಂಬರಂ!
ನವದೆಹಲಿ , ಸೋಮವಾರ, 14 ಜೂನ್ 2021 (09:45 IST)
ನವದೆಹಲಿ: ಪ್ರಧಾನಿ ಮೋದಿ ಜಿ7 ಶೃಂಗದಲ್ಲಿ ಮಾತನಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೊಗಳಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.


ಪ್ರಧಾನಿ ಮೋದಿ ಭಾಷಣವನ್ನು ಸ್ಪೂರ್ತಿದಾಯಕ ಎಂದಿರುವ ಚಿದಂಬರಂ ಜೊತೆಗೆ ವ್ಯಂಗ್ಯವನ್ನೂ ಮಾಡಿದ್ದಾರೆ. ವಿಶ್ವದ ಎದುರು ಏನು ಭಾಷಣ ಮಾಡಿದ್ದಾರೋ ಅದನ್ನು ಮೋದಿ ಸರ್ಕಾರ ಭಾರತದಲ್ಲಿ ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

‘ಪ್ರಧಾನಿ ಮೋದಿ ಮಾತುಗಳು ಸ್ಪೂರ್ತಿದಾಯಕವಾಗಿತ್ತು. ಅಲ್ಲಿ ಹೇಳಿದ ಮಾತುಗಳನ್ನು ಅವರು ಮೊದಲು ನಮ್ಮ ದೇಶದಲ್ಲಿ ಮಾಡಿ ತೋರಿಸಲಿ. ಜಿ7 ಶೃಂಗದಲ್ಲಿ ನೇರವಾಗಿ ಭಾಗವಹಿಸದ ಏಕೈಕ ನಾಯಕ ಮೋದಿ ಆಗಿದ್ದರು. ಯಾಕೆಂದರೆ ಭಾರತ ಅತ್ಯಂತ ಹೆಚ್ಚು ಕೊರೋನಾ ಸೋಂಕಿರುವ ರಾಷ್ಟ್ರ. ಈ ಕಾರಣಕ್ಕೇ ಅವರನ್ನು ಇತರ ರಾಷ್ಟ್ರಗಳು ದೂರವಿಟ್ಟಿದೆ’ ಎಂದು ಚಿದಂಬರಂ ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಕನಿಷ್ಠ ಕೊರೋನಾ ಕೇಸ್