Select Your Language

Notifications

webdunia
webdunia
webdunia
Sunday, 13 April 2025
webdunia

ಈಶ್ವರಪ್ಪ-ರೇಣುಕಾಚಾರ್ಯ ಹುಲಿವೇಷ ಸಮರ

ಕೆಎಸ್ ಈಶ್ವರಪ್ಪ
ಬೆಂಗಳೂರು , ಗುರುವಾರ, 10 ಜೂನ್ 2021 (09:56 IST)
ಬೆಂಗಳೂರು: ಸಿಎಂ ರಾಜೀನಾಮೆ ವಿಚಾರ ಬಿಜೆಪಿಯ ಒಳಮುನಿಸನ್ನು ಮತ್ತಷ್ಟು ಬಹಿರಂಗಗೊಳಿಸಿದೆ. ಇದೀಗ ಸಚಿವ ಕೆಎಸ್ ಈಶ್ವರಪ್ಪ ಮತ್ತು ರೇಣುಕಾಚಾರ್ಯ ನಡುವೆ ಮಾತಿನ ಚಕಮಕಿ ನಡೆದಿದೆ.


ಮೊನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಈಶ್ವರಪ್ಪ, ಸಿಎಂ ರಾಜೀನಾಮೆ ವಿಚಾರವನ್ನು ಯಾರೂ ಮಾತನಾಡುವ ಹಾಗಿಲ್ಲ. ರೇಣುಕಾಚಾರ್ಯರ ಹುಲಿವೇಷ ಆಟ ಬಿಜೆಪಿಯಲ್ಲಿ ನಡೆಯಲ್ಲ ಎಂದು ವ್ಯಂಗ್ಯ ಮಾಡಿದ್ದರು. ಸಿಎಂ ವಿರುದ್ಧ ಸಹಿ ಸಂಗ್ರಹಕ್ಕೆ ಮುಂದಾಗಿದ್ದ ರೇಣುಕಾಚಾರ್ಯಗೆ ಈಶ್ವರಪ್ಪ ಈ ರೀತಿ ಟಾಂಗ್ ಕೊಟ್ಟಿದ್ದರು.

ಇದೀಗ ಈಶ್ವರಪ್ಪಗೆ ಟ್ವಿಟರ್ ಮೂಲಕವೇ ತಿರುಗೇಟು ಕೊಟ್ಟಿರುವ ರೇಣುಕಾಚಾರ್ಯ, ನಾನು ಯಾವುದೇ ವೇಷಧಾರಿಯಲ್ಲ. ನನಗೆ ಹಿರಿಯರ ಬಗ್ಗೆ ಗೌರವವಿದೆ. ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನಗೆ ಹುಲಿವೇಷ ಎಂದವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಮಾಡುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ