Publish Date: Fri, 28 May 2021 (17:38 IST)
Updated Date: Fri, 28 May 2021 (17:40 IST)
ಹುಬ್ಬಳ್ಳಿ: ಬಿಎಸ್ ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಯಾರು ಸಮರ್ಥ ನಾಯಕರಿಲ್ಲ ಎಂದು ಸಿದ್ದರಾಮಯ್ಯ ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸಿಎಂ ಬದಲಾದ್ರೆ ಮತ್ತೊಬ್ಬ ಸಮರ್ಥರು ಇಲ್ಲ. ಬಿಜೆಪಿಯಲ್ಲಿ ಸಿಎಂ ಬಿಟ್ರೆ ಸಮರ್ಥ ಯಾರು ಇಲ್ಲ. ಬಿಎಸ್ ಯಡಿಯೂರಪ್ಪ ಬಳಿಕ ಯಾರು ಸಮರ್ಥರಲ್ಲ. ಅದೇಕಾರಣಕ್ಕೆ ಬಿಜೆಪಿಯಲ್ಲಿ ಬೀದಿ ಕಾಳಗ ನಡೆಯುತ್ತಿದೆ. ಬಿಎಸ್ ವೈ ಬಗ್ಗೆ ದ್ವೇಷವೂ ಇಲ್ಲ, ಪ್ರೀತಿನೂ ಇಲ್ಲ. ಮನುಷ್ಯತ್ವದ ಆಧಾರದ ಮೇಲೆ ಪ್ರೀತಿ ಇದೆ. ಯೋಗೀಶ್ವರ್ ಗೆ ಲೂಟಿ ಹೊಡೆಯುವ ಖಾತೆ ಸಿಕ್ಕಿಲ್ಲ. ಹಾಗಾಗಿ ಸಿಎಂ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಸಿಎಂ ಪರವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.