Select Your Language

Notifications

webdunia
webdunia
webdunia
webdunia

ಸಿಎಂ ರಾಜೀನಾಮೆ ಅಸ್ತ್ರಕ್ಕೆ ಆಪ್ತರ ಮುಲಾಮು

ಸಿಎಂ ರಾಜೀನಾಮೆ ಅಸ್ತ್ರಕ್ಕೆ ಆಪ್ತರ ಮುಲಾಮು
ಬೆಂಗಳೂರು , ಸೋಮವಾರ, 7 ಜೂನ್ 2021 (08:36 IST)
ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಗಳಿಂದ ಬೇಸತ್ತ ಸಿಎಂ ಯಡಿಯೂರಪ್ಪ ಹೈಕಮಾಂಡ್ ಬಯಸಿದರೆ ರಾಜೀನಾಮೆಗೆ ಸಿದ್ಧ ಎಂದು ಹೇಳಿರುವುದು ಅವರ ಆಪ್ತರಲ್ಲಿ ತಲ್ಲಣ ಮೂಡಿಸಿದೆ.


ಒಂದು ವೇಳೆ ಹೈಕಮಾಂಡ್ ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡ ಎಂದರೆ ತಕ್ಷಣವೇ ಅಧಿಕಾರದಿಂದ ಕೆಳಗಿಳಿಯಲು ಸಿದ್ಧ ಎಂದಿದ್ದರು.

ಇದು ಅವರ ಆಪ್ತ ವಲಯದಲ್ಲಿ ತಲ್ಲಣ ಮೂಡಿಸಿತು. ತಕ್ಷಣವೇ ಅವರ ಆಪ್ತ ಸಚಿವರಾದ ಆರ್. ಅಶೋಕ್, ರೇಣುಕಾಚಾರ್ಯ ಮುಂತಾದವರು ಸಿಎಂ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಇದರ ಬಳಿಕ ಈ ಸಚಿವರು ಯಾವುದೇ ಕಾರಣಕ್ಕೂ ಯಡಿಯೂರಪ್ಪನವರ ನಾಯಕತ್ವದಲ್ಲಿ ಬದಲಾವಣೆ ಬೇಡ. ಅವರಿಲ್ಲದೇ ರಾಜ್ಯ ಬಿಜೆಪಿಯಿಲ್ಲ ಎಂದು ಅಪಸ್ವರ ಎತ್ತಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಹೈಕಮಾಂಡ್ ಮುಂದೆ ನಾಯಕತ್ವ ಬದಲಾವಣೆ ಪ್ರಸ್ತಾವನೆಯೇ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆಯುವ ಯತ್ನ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ನಗರಕ್ಕೆ ಲಾಕ್ ಡೌನ್ ವಿನಾಯ್ತಿ?