Publish Date: Sun, 20 Jun 2021 (10:17 IST)
Updated Date: Sun, 20 Jun 2021 (10:18 IST)
ಬೆಂಗಳೂರು: ಕೊರೋನಾ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಕೆಲವೆಡೆ ಹಿನ್ನಡೆ ಅನುಭವಿಸಿತ್ತು. ಅದರಿಂದಾಗಿ ಸಿಎಂ ಬಿಎಸ್ ವೈ ನೇತೃತ್ವದ ಸರ್ಕಾರದ ವಿರುದ್ಧ ಹಲವರು ಟೀಕಾಪ್ರಹಾರ ನಡೆಸಿದ್ದರು.
ಕೊರೋನಾ ಸಂದರ್ಭದಲ್ಲಿ ಹೋದ ಮಾನ ಮರಳಿ ಪಡೆಯಲು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಡುವೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಪಕ್ಷದ ವರ್ಚಸ್ಸು ಮರಳಿ ಪಡೆಯುವುದು, ಪಕ್ಷ ಸಂಘಟನೆಗೆ ಒತ್ತು ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ನಾಳೆಯಿಂದ ಕೇಂದ್ರ ಸರ್ಕಾರದ ವತಿಯಿಂದ ಸಿಗುವ ಉಚಿತ ಕೊರೋನಾ ವ್ಯಾಕ್ಸಿನ್ ಎಲ್ಲಾ ಕೇಂದ್ರಗಳಲ್ಲಿ ಲಭ‍್ಯವಾಗಲಿದೆ. ಹೀಗಾಗಿ ಇದನ್ನು ಸಮರ್ಪಕವಾಗಿ ವಿತರಿಸುವ ಕುರಿತಂತೆಯೂ ಈ ಸಭೆಯಲ್ಲಿ ಜೆಪಿ ನಡ್ಡಾ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.