Select Your Language

Notifications

webdunia
webdunia
webdunia
webdunia

ತನಿಖೆ ಬಳಿಕ ಸತ್ಯ ತಿಳಿಯಲಿದೆ

ತನಿಖೆ ಬಳಿಕ ಸತ್ಯ ತಿಳಿಯಲಿದೆ
ಚಾಮರಾಜನಗರ , ಶುಕ್ರವಾರ, 14 ಜುಲೈ 2023 (20:32 IST)
ಚಾಮರಾಜನಗರಕ್ಕೆ ದಕ್ಷಿಣ ವಲಯ DIG ಬೋರಲಿಂಗಯ್ಯ ಭೇಟಿ ನೀಡಿ ಪೊಲೀಸರೊಂದಿಗೆ ಸಭೆ ನಡೆಸಿದ್ದಾರೆ.. ಯಾವುದೇ ಪ್ರಕರಣಗಳನ್ನು ನಿರ್ಲಕ್ಷಿಸದಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇನ್ನು ಟಿ.ನರಸೀಪುರ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಕೊಲೆ ಪ್ರಕರಣ ವಿಚಾರವಾಗಿ DIG ಬೋರಲಿಂಗಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಈಗಾಗಲೇ ಮಾತಾಡಿದ್ದಾರೆ. ಘಟನೆ ತಡೆಯೋ ವಿಚಾರವಾಗಿ ಪೊಲೀಸರಿಂದ ಸಣ್ಣಪುಟ್ಟ ತಪ್ಪಾಗಿದ್ದು, ಅವಘಡ ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದಿದ್ದಾರೆ. ಘಟನೆ ಬಳಿಕ ಆರೋಪಿಗಳ ಬಂಧಿಸಲಾಗಿದೆ. ಪ್ರಕರಣವನ್ನ ಲಾಜಿಕಲ್ ಎಂಡ್​​ಗೆ ತೆಗೆದುಕೊಂಡು ಹೋಗಲಾಗುವುದು. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಏನು ಮಾಡಬೇಕೋ ಅದನ್ನ ಮಾಡಿದ್ದೇವೆ ಎಂದರು. ಇನ್ನು ಪುನೀತ್ ಫೋಟೋ ತೆರವುಗೊಳಿಸಿದ್ದೆ ಕೊಲೆಗೆ ಕಾರಣವಾಯ್ತಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫೋಟೋ ವಿಚಾರ, ಬೈಕ್ ಬಿಡಲಿಲ್ಲ ಎಂಬ ವಿಚಾರಗಳ ಬಗ್ಗೆ ಮಾಹಿತಿ ಬರ್ತಾ ಇದೆ. ಹಳೆ ವೈಷಮ್ಯವೂ ಇರಬಹುದು, ತನಿಖೆ ಸಂಪೂರ್ಣ ಆದ ಬಳಿಕ ಎಲ್ಲ ವಿವರ ತಿಳಿಯಲಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭೂಗಳ್ಳರ ಕಾಟಕ್ಕೆ ಅನ್ನದಾತರು ಕಂಗಾಲು