Select Your Language

Notifications

webdunia
webdunia
webdunia
webdunia

ಪತ್ನಿಯನ್ನೇ ಕೊಂದ ಪಾಪಿ ಪತಿ

Sinful husband who killed his wife
bangalore , ಶುಕ್ರವಾರ, 14 ಜುಲೈ 2023 (18:53 IST)
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೋರ್ವ ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ. ಯಡಿಯೂರು ಗ್ರಾಮದ ನಿವಾಸಿ ಅನಿತಾ ಮೃತಪಟ್ಟ ಮಹಿಳೆ. ವರದಕ್ಷಿಣೆ ತರುವಂತೆ ಆಗಾಗ್ಗೆ ಪತ್ನಿ ಅನಿತಾಗೆ ಯೋಗೇಶ್ ಕಿರುಕುಳ ನೀಡುತ್ತಿದ್ದ.. ಹತ್ತಾರು ಬಾರಿ ರಾಜಿ ಸಂಧಾನ ಮಾಡಲಾಗಿತ್ತು. ಅಷ್ಟೇ ಅಲ್ಲ, ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದರೂ, ಯೋಗೇಶ್ ಬದಲಾಗದೆ ತನ್ನ ಕಿರುಕುಳ ಮುಂದುವರಿಸಿದ್ದ.. ನಿನ್ನೆ ಹಳೆ ಚಾಳಿಯನ್ನು ಮುಂದುವರೆಸಿದ ಯೋಗೇಶ್​ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.. ಕೊಲೆ ಮಾಡಿ ಆರೋಪಿ ಯೋಗೇಶ್​ ಪರಾರಿಯಾಗಿದ್ದಾನೆ.. ಘಟನೆ ಸಂಬಂಧ ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ