Publish Date: Sat, 22 Oct 2022 (17:25 IST)
Updated Date: Sat, 22 Oct 2022 (17:29 IST)
ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಪತಿ ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಿನ, ಬುಡರಕಟ್ಟಿ ಗ್ರಾಮದ ನಿವಾಸಿಯಾದ 60 ವರ್ಷದ ಚನ್ನಬಸಪ್ಪ ಸಂಗಪ್ಪ ಅಡಕಿ, ತನ್ನ ಪತ್ನಿಯಾದ 55 ವರ್ಷದ ಕೊದನಾಪುರದ ರುದ್ರವ್ವ ಅಡಕಿಯನ್ನು ಕೊಲೆ ಮಾಡಿದ್ದಾನೆ. ಆರೋಪಿ ಕೊಲೆಗೈದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಕೊದನಾಪುರದ ತವರು ಮನೆಯಲ್ಲಿ ರುದ್ರವ್ವ ವಾಸವಿದ್ದಳು. ಈತನು ಕೂಡ ಆಕೆಯ ಮನೆಯಲ್ಲೇ ವಾಸವಿದ್ದು, ನಿನ್ನೆ ಬೆಳಿಗ್ಗೆ ಪತಿ-ಪತ್ನಿ ಮಧ್ಯೆ ಗಲಾಟೆ ಆಗಿತ್ತು. ರುದ್ರವ್ವ ಬಳಿಕ ಹೊಲಕ್ಕೆ ಹೋಗಿದ್ದಳು. ಅದೇ ಕೋಪದಲ್ಲಿ ಚನ್ನಬಸಪ್ಪ ಕುಡಗೋಲಿನಿಂದ ಕೊಚ್ಚಿ ರುದ್ರವ್ವನ ಕೊಲೆ ಮಾಡಿದ್ದಾನೆ. ಬಳಿಕ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ರುದ್ರವ್ವ ಅಡಕಿ ಮೃತಪಟ್ಟಿದ್ದಾಳೆ. ಈ ಸಂಬಂಧ ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.