Select Your Language

Notifications

webdunia
webdunia
webdunia
webdunia

ಗುಂಡಿ ಬಿದ್ದ ರಸ್ತೆಗೆ KRSನಿಂದ ಪೂಜೆ

Puja by KRS for the potholed road
bangalore , ಶನಿವಾರ, 22 ಅಕ್ಟೋಬರ್ 2022 (17:04 IST)
ಗುಂಡಿ ಬಿದ್ದು ಹಾಳಾಗಿರುವ ರಸ್ತೆಗೆ ಕೆಆರ್ ಎಸ್ ಪಕ್ಷ ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬರಿ ಗುಂಡಿಗಳದ್ದೇ ಕಾರುಬಾರು, ಯಮಸ್ವರೂಪಿ ಗುಂಡಿಗಳಿಗೆ ಕೆಆರ್ ಎಸ್ ಪಕ್ಷದಿಂದ ತೆಂಗಿನಕಾಯಿ, ಕುಂಕುಮ ಹಾಕಿ ಪೂಜೆ ಸಲ್ಲಿಸಲಾಯಿತು ಎಂದು ಕೆಆರ್ ಎಸ್ ಪಕ್ಷದ ಕಾರ್ಯಕರ್ತೆ ಜನನಿ ಹೇಳಿದ್ದಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಸಾವಿರಾರು ಗುಂಡಿಗಳು ಇವೆ. ಬಿಬಿಎಂಪಿ ಸಾವಿಗೆ ಬೆಲೆ ಕಟ್ಟುತ್ತಿವೆ. ನಿತ್ಯ ಜನರು ಕಾಲು ಕೈ ಮುರಿದುಕೊಳ್ಳುತ್ತಿದ್ದಾರೆ. ಬಿಬಿಎಂಪಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಬೆಂಗಳೂರಿನ ಮರ್ಯಾದೆಯನ್ನು ಶಾಸಕ, ಸಚಿವರು ಹಾಗೂ ಬಿಬಿಎಂಪಿ ಹರಾಜು ಹಾಕುತ್ತಿದೆ. BBMP ರಸ್ತೆ ಗುಂಡಿ ಮುಚ್ಚಲು 2 ಸಾವಿರ ಕೋಟಿ ಹಣ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಯಾವ ಗುಂಡಿಯೂ ಮುಚ್ಚಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

RTO ಚೆಕ್​​ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ