Publish Date: Fri, 14 Jul 2023 (18:05 IST)
Updated Date: Fri, 14 Jul 2023 (19:10 IST)
ಕರ್ತವ್ಯ ಲೋಪವೆಸಗಿದ ಹಿನ್ನೆಲೆ ರಾಯಚೂರು ನಗರಸಭೆಯ ಇಬ್ಬರು ಪೌರಾಯುಕ್ತರು ಅಮಾನತಾಗಿದ್ದಾರೆ.ಹಾಲಿ ಪೌರಾಯುಕ್ತ ಗುರಲಿಂಗಪ್ಪ ಹಾಗೂ ಹಿಂದಿನ ಪೌರಾಯುಕ್ತ ರಮೇಶ ನಾಯಕ ಇಬ್ಬರನ್ನು ಸಸ್ಪೆಂಡ್ ಮಾಡಿ ಪೌರಾಡಳಿತ ಇಲಾಖೆ ನಿರ್ದೇಶಕಿ ಮಂಜುಶ್ರಿ ಆದೇಶಿಸಿದ್ದಾರೆ. ಅಮಾನತಾದ ಅಧಿಕಾರಿಗಳು ಟೆಂಡರ್ ನಿಯಮದಡಿ ಅಕ್ರಮವೆಸಗಿದ್ದರು, LED ಲೈಟ್ ಅಳವಡಿಕೆಯಲ್ಲಿ 33 ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪ ಇವರ ಮೇಲಿತ್ತು. ರಾಯಚೂರ ನಗರದ ಮಾಳೇಶ್ವರ ವೃತ್ತದಿಂದ ಗಂಜ್ ಸರ್ಕಲ್ವರೆಗೆ LED ಬಲ್ಬ್ ಅಳವಡಿಕೆಯಲ್ಲಿ ಅಕ್ರಮವೆಸಗಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ತನಖೆಯಲ್ಲಿ ಅಕ್ರಮ ಬಟಾ ಬಯಲಾಗಿತ್ತು.. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.