ಬಿಎಂಟಿಸಿ ಅಧಿಕಾರಿಗಳ ಅಕೌಂಟ್ ನಲ್ಲಿ ಲಕ್ಷ ಲಕ್ಷ ಲಂಚದ ಹಣ ಪತ್ತೆಯಾಗಿದ್ದು,ತಮ್ಮ ಆಪ್ತರ ಅಕೌಂಟ್ ಮೂಲಕ ಅಧಿಕಾರಿಗಳು ಲಂಚ ಪಡೆಯುತ್ತಿದರು.ಗೂಗಲ್ ಪೇ, ಪೋನ್ ಪೇ ಲಂಚ ಪಡೆದಿರುವ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದಾರೆ.94 ಅಧಿಕಾರಿಗಳ ಮೇಲೆ ಲಂಚ ಪಡೆದು ಡ್ಯೂಟಿ ನೀಡಿರುವ ಆರೋಪ ಇದ್ದು,ಮತ್ತಷ್ಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್ ಆಗಲಿದ್ದಾರೆ.ಗೂಗಲ್ ಪೇ ಫೋನ್ ಪೇ ಮೂಲಕ ಬಿಎಂಟಿಸಿ ಅಧಿಕಾರಿಗಳು ಲಂಚ ಪಡೆಯುತ್ತಿದ್ರು.ಬಿಎಂಟಿಸಿಯಲ್ಲಿ ಡ್ಯೂಟಿ ಬೇಕು ಅಂದರೆ ಕಂಡಕ್ಟರ್ ಡ್ರೈವರ್ ಗಳು ಲಂಚ ಕೊಡಬೇಕು.ವಾರಕ್ಕೆ ಐನೂರು ರುಪಾಯಿ ತಿಂಗಳಿಗೆ ಕೊಡಬೇಕು ಎರಡು ಸಾವಿರ ರೂಪಾಯಿ.ಆರ್ ಆರ್ ನಗರ ಡಿಪೋದ ಚಾಲಕ ಕಂ ಡ್ರೈವರ್ ಹೊಳೆಬಸಪ್ಪ ಲಂಚ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಡ್ಯೂಟಿ ನೀಡಿರಲಿಲ್ಲ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ .ಅಂದು ಆತನ ಜೇಬಲ್ಲಿದ್ದ ಡೆತ್ ನೋಟ್ ನಲ್ಲಿ ಲಂಚದ ಬಗ್ಗೆ ಬರೆದುಕೊಂಡಿದ್ದ.ಅಂದು ತನಿಖೆಗೆ ಆದೇಶ ಮಾಡಿದ್ದ ಬಿಎಂಟಿಸಿಯ ಎಂಡಿ ಜಿ. ಸತ್ಯವತಿ.ನಿರಂತರವಾಗಿ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥೆ ರಾಧಿಕಾ.ಎಡೆಮುರಿ ಕಟ್ಟಿದ್ದಾರೆ.
ಸಸ್ಪೆಂಡ್ ಆದ ಬಿಎಂಟಿಸಿ ಅಧಿಕಾರಿಗಳು
1- ರಮೇಶ್. ಕೆ ಡಿಪೋ- 8 ಕಾನ್ಸ್‌ಟೇಬಲ್ ( ಪೋನ್ ಪೇ ಮೂಲಕ ಲಂಚ ಪಡೆದಿರುವ ಹಣ- 51.630 ಸಾವಿರ ರುಪಾಯಿ )
2- ಮಹಮ್ಮದ್ ರಫಿ. ಸಿಬ್ಬಂದಿ ಮೇಲ್ವಿಚಾರಕ ಡಿಪೋ- 8 ( ಗೂಗಲ್ ಪೇ - 20.600 ಸಾವಿರ ರುಪಾಯಿ)
3- ಕೆ.ಎಸ್ ಚಂದನ್. ಕಿರಿಯ ಸಹಾಯಕ. ಡಿಪೋ- 8 ( ಗೂಗಲ್ ಪೇ -7.28.045 ಲಕ್ಷ ರುಪಾಯಿ)
4- ಇಬ್ರಾಹಿಂ ಜಿಬೀವುಲ್ಲಾ. ಕಾನ್ಸ್‌ಟೇಬಲ್ ಡಿಪೋ- 8 ( ಪೋನ್ ಪೇ- 46.631 ಸಾವಿರ ರುಪಾಯಿ)
5- ಗೋವರ್ಧನ್ ಹೆಚ್.ಎಂ ಚಾಲಕ ಡಿಪೋ- 8 ( ಗೂಗಲ್ ಪೇ, ಪೋನ್ ಪೇ ಮೂಲಕ- 3.15 .182 ಲಕ್ಷ ರುಪಾಯಿ)
6- ಕೆ. ಶರವಣ. ಅಂಕಿಅಂಶ ಸಹಾಯಕ ಡಿಪೋ-8 ( ಪೋನ್ ಪೇ ಗೂಗಲ್ ಪೇ- 64.500 ಸಾವಿರ ರುಪಾಯಿ)
7- ಶ್ರವಣ್ ಕುಮಾರ್ ಸಾತಪತಿ. ವಿಭಾಗೀಯ ಭದ್ರತಾ ಅಧೀಕ್ಷಕ( ಬಿಎಂಟಿಸಿಯ ಭದ್ರತಾ ಇಲಾಖೆ) ಹಣ ವಸೂಲಿಯಂತ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ
8- ಪಂಕಜಾ.ಕೆ.ಆರ್ ಮಾರ್ಕೆಟ್. ಸಹಾಯಕ ಸಂಚಾ ಅಧೀಕ್ಷಕಿ. ಕ್ಯಾಷ್ ಮೂಲಕ ಮೂರು ಸಾವಿರ ಲಂಚ ಪಡೆದಿದ್ದ ವೇಳೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ
(ವರ್ಗಾವಣೆ ಆದ ಅಧಿಕಾರಿಗಳು)
ಇನ್ನು ಫೋನ್ ಪೇ ಗೂಗಲ್ ಪೇ ಲಂಚ ಪ್ರಕರಣದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ
ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ( BMTC divisional controller )
ಚಂದ್ರಶೇಖರ್, ಜಗದೀಶ್ ಇಬ್ಬರನ್ನೂ ವರ್ಗಾವಣೆ ಮಾಡಲಾಗಿದ್ದು
ಚಂದ್ರಶೇಖರ್. ಕಲಬುರಗಿಯ ಕಲ್ಯಾಣ ಕರ್ನಾಟಕ ಸಾರಿಗೆಗೆ ಜಗದೀಶ್. ರಾಮನಗರ ಕೆಎಸ್ಆರ್ಟಿಸಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ