Select Your Language

Notifications

webdunia
webdunia
webdunia
webdunia

ಬೇರೆ ರಾಜ್ಯದ ಯುವಕ ಯುವತಿಯರೇ ಇವರ ಟಾರ್ಗೆಟ್!

His target is young men and women from other states
bangalore , ಮಂಗಳವಾರ, 13 ಡಿಸೆಂಬರ್ 2022 (16:16 IST)
ಮಾಸ್ ಕಾಪಿ  ಮಾಡಿಸಿ ನರ್ಸಿಂಗ್ ಎಕ್ಸಾಂನ್ನ  ಆರೋಪಿಗಳು ಬರೆಸಿದ್ರು.ಇದೀಗ ಯಶವಂತಪುರ ಪೊಲೀಸರಿಂದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
 
ಜಿಯಾ ಹಕ್, ಪಲ್ಲಬ್ ಮೈತಿ, ಅಥುರು ಸಮಂತಾಗಾಗಿ ಹುಡುಕಾಟ ನಡೆಸಿದ್ದಾರೆ.ನರ್ಸಿಂಗ್ ಎಕ್ಸಾಂ ಡೀಲ್ ನಡೆಸ್ತಿದ್ದ ಮೂವರು ಆರೋಪಿಗಳು.ಲಕ್ಷಾಂತರ ರೂಪಾಯಿ ಹಣ ಪಡೆದು ಮಾಸ್ ಕಾಪಿ ಮಾಡಿಸಿದ್ದು,ಇದೀಗ ಯಶವಂತಪುರ ಪೊಲೀಸರು ನರ್ಸಿಂಗ್ ಬೋರ್ಡ್ ಗೆ ಪತ್ರವನ್ನ ಬರೆದಿದ್ದಾರೆ.ಸೀರಿಯಲ್ ನಂಬರ್ ಇಟ್ಕೊಂಡು ಮಾಹಿತಿಯನ್ನ ಪೊಲೀಸರು ಕಳಿಸಿದ್ದಾರೆ.ಪಿಎಸ್ ಐ, ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ರೀತಿನೇ ಈ ನರ್ಸಿಂಗ್ ಡೀಲ್ ನಡೆದಿತ್ತಾ..?ಅನ್ನುವ ಶಂಕೆ ವ್ಯಕ್ತವಾಗಿದೆ.ಅಷ್ಟೇ ಅಲ್ಲ ಆರೋಪಿಗಳು ರಜಿಯಾ ಸುಲ್ತಾನಾ ಎಂಬವರಿಂದಲೂ ಎಕ್ಸಾಂ ಬರೆಸ್ದೇನೇ ಫೇಕ್ ಕಾಲೇಜಿನಲ್ಲಿ ಅಡ್ಮಿಷನ್ ಲೆಟರ್ ಕೊಟ್ಟಿದ್ದಾರೆ.
 
1.20 ಲಕ್ಷ ಪಡೆದು ಫೇಕ್ ಕಾಲೇಜಿನ ಅಡ್ಮಿಷನ್ ಲೆಟರ್ ನ್ನ ಆರೋಪಿಗಳು ಕೊಡಿಸಿದ್ದಾರೆ.HPR school of Nursing ಹೆಸರಲ್ಲಿ ಫೇಕ್ ಅಡ್ಮಿಷನ್ ಲೆಟರ್ ಮಾಡಿದ್ದ ಆರೋಪಿಗಳು.ನರ್ಸಿಂಗ್ ಮಾಫಿಯಾ ಹಿಂದಿರೋ ಪ್ರಭಾವಿ ವ್ಯಕ್ತಿಗಳ ಯಾರು..?ಅನ್ನುವ ಶಂಕೆ ವ್ಯಕ್ತವಾಗಿದ್ದು,ಸದ್ಯ ಆರೋಪಿಗಳ ಪತ್ತೆಗೆ ಯಶವಂತಪುರ ಪೊಲೀಸರು ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನಗರದ ಕೆಲವೆಡೆ ವಿದ್ಯುತ್ ವ್ಯತ್ಯಾಯ...!