Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ಬಿಜೆಪಿ ಭಯವಿದೆ – ಆರ್ ಆಶೋಕ್

Congress is afraid of BJP
bangalore , ಸೋಮವಾರ, 12 ಡಿಸೆಂಬರ್ 2022 (21:01 IST)
ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ‌ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಆಂತರಿಕ ಸಭೆ ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿ ಡಿಕೆಶಿ ಸಿದ್ದರಾಮಯ್ಯ ಬೀದಿ ಜಗಳ ಆಡ್ತಿದ್ರು,ಇಬ್ಬರ ಜಗಳ ಕಾಂಪ್ರಮೈಸ್ ಮಾಡೋಕೆ ಖರ್ಗೆ ದೆಹಲಿಗೆ ಕರೆದಿದ್ದಾರೆ. ಬೀದಿ ಜಗಳ ಬೆಂಗಳೂರಿನಲ್ಲಿ‌ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದ್ದಾರೆ. ಮೋದಿ,ಅಮಿತ್ ಶಾ ರಾಜ್ಯಕ್ಕೆ  ಬರ್ತಾರೆ ಹುಷಾರಾಗಿರಿ ಅಂತ ಖರ್ಗೆ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆ. ಇನ್ನೂ ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿರುವ ಪಕ್ಷ, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಪಕ್ಷ 77 ಸ್ಥಾನಕ್ಕೆ ಕುಸಿಯಿತು.ಕಾಂಗ್ರೆಸ್ಸಿನ 15 ಜನ ಪಕ್ಷವನ್ನೆ ಬಿಟ್ಟು ಹೋದ್ರು, ಅವರ ಪಕ್ಷದಲ್ಲಿನ ಶಾಸಕರನ್ನೆ ಅವರಿಗೆ ಉಳಿಸಿಕೊಳ್ಳೋಕೆ ಯೋಗ್ಯತೆ ಇಲ್ಲ. ಇನ್ನೂ ಅಧಿಕಾರಕ್ಕೆ ಬರ್ತಾರಾ ? ಗೋವಾದ ರೀತಿಯಲ್ಲಿ ಇಲ್ಲೂ ಕೂಡ ಆಣೆ,ಪ್ರಮಾಣ  ಮಾಡಿಸಿಕೊಳ್ಳುತ್ತೇನೆ ಅಂದಿದ್ದಾರೆ. ಈ ಹಿನ್ನಲೆ  ಕಾಂಗ್ರೆಸ್ಸಿಗೆ ಬಿಜೆಪಿಯ ಭಯವಿದೆ ಎಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ