Select Your Language

Notifications

webdunia
webdunia
webdunia
webdunia

ಮಾಂಡೌಸ್ ಚಂಡಮಾರತದ ಎಫೆಕ್ಟ್ - ಇನ್ನೂ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

ಮಾಂಡೌಸ್ ಚಂಡಮಾರತದ ಎಫೆಕ್ಟ್ - ಇನ್ನೂ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ
bangalore , ಮಂಗಳವಾರ, 13 ಡಿಸೆಂಬರ್ 2022 (17:58 IST)
ರೌದ್ರರೂಪ ತಾಳಿರುವ ಮಾಂಡೌಸ್ ಚಂಡಮಾರುತ ದಕ್ಷಿಣ ರಾಜ್ಯಗಳನ್ನ ನಲುಗುವಂತೆ ಮಾಡಿದೆ. ಚಂಡಮಾರುತದ ಹೊಡೆತಕ್ಕೆ ತಮಿಳುನಾಡು, ಕೇರಳ ಪತರುಗುಟ್ಟಿ ಹೋಗಿದೆ. ಕರುನಾಡಿಗೂ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ ತುಸು ಜಾಸ್ತಿಯೇ ತಟ್ಟಿದೆ. ಕರುನಾಡಿನಾದ್ಯಂತ ಶೀತ ಗಾಳಿ ಬೀಸುತ್ತಿದ್ದು ಆರೋಗ್ಯ ಇಲಾಖೆ ಗೈಡ್ಲೈನ್ಸ್ ಹೊರಡಿಸಿದೆ.
 
ಒಂದು ವಾರ.. ಸತತ ಒಂದು ವಾರದಿಂದ ಮಾಂಡೌಸ್ ಚಂಡಮಾರುತ ಅಬ್ಬರಿಸುತ್ತಿದೆ. ಕರಾವಳಿಗೆ ಬಂದಪ್ಪಳಿಸಿ ಹೋದ ಮಾಂಡೌಸ್ ಹಲವೆಡೆ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಸೈಕ್ಲೋನ್ ಹೊಡೆತಕ್ಕೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ತತ್ತರಿಸಿ ಹೋಗಿದ್ರೆ ಕರುನಾಡು ಚುಮು ಚುಮು ಚಳಿಗೆ ಗಢ ಗಢ ನಡಗುತ್ತಿದೆ. ರಾಜ್ಯಾದ್ಯಂತ ಬಿಟ್ಟೂ ಬಿಡದೇ ಜಿಟಿ ಜಿಟಿ ಮಳೆ ಸುರೀತಿದೆ. ಎಲ್ಲೆಡೆ ಮೋಡಕವಿದ ವಾತಾವರಣ ಆವರಿಸಿದ್ದು, ಶೀತ ಗಾಳಿ ಬೀಸ್ತಿದೆ.
 
ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಾಂಡೌಸ್ ಚಂಡಮಾರತದ ಎಫೆಕ್ಟ್ ಕಂಟಿನ್ಯೂ ಆಗಲಿದೆ. ಡಿಸೆಂಬರ್ 16ರವರೆಗೂ, ಅಂದ್ರೆ ಇನ್ನೂ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಚಾಮರಾಜನಗರ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಇನ್ನೂ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಜಿಟಿಜಿಟಿ ಮಳೆ ಜೊತೆ ಕೂಲ್ ಕೂಲ್ ವಾತಾವರಣ ಮುಂದುವರಿಯಲಿದೆ.
 
ಮಳೆಯ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಶೀತ ವಾತಾವರಣ ಆವರಿಸುವ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಹೆಚ್ಚು ಕಾಳಜಿಯಿಂದ ಇರುವಂತೆ ಸೂಚಿಸಿದೆ. ಶೀತ ಹಿನ್ನೆಲೆ ಏನೆಲ್ಲಾ ಮಾಡಬೇಕು ಯಾವುದೆಲ್ಲಾ ಮಾಡಬಾರದು ಅಂತಾ ಗೈಡ್ಲೈನ್ಸ್ನಲ್ಲಿ ತಿಳಿಸಿದೆ.
 
 
ಶೀತ ಗಾಳಿ.. ಏನೆಲ್ಲಾ ಮಾಡಬೇಕು?
ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯಬೇಕು
ಜೀರ್ಣವಾಗುವ ಆಹಾರ, ತಾಜಾ ಆಹಾರ ಸೇವಿಸಬೇಕು
ಮನೆಯ ಹೊರಗೂ ಒಳಗೂ ಸ್ವೆಟರ್, ಕಿವಿ ಮುಚ್ಚಿ ಓಡಾಡಿ
ಸ್ನಾನ ಮಾಡಲು ಬೆಚ್ಚಗಿನ ನೀರನ್ನೇ ಬಳಸಬೇಕು
ಅನಗತ್ಯವಾಗಿ ಹೊರಗಿನ ಓಡಾಟವನ್ನ ತಪ್ಪಿಸಬೇಕು
ನೆಗಡಿ, ಕೆಮ್ಮ, ಜ್ವರ ಇರುವವರಿಂದ ಅಂತರ ಕಾಪಾಡಿ
ಕೈಕಾಲುಗಳನ್ನು ಅಗಾಗ ಸೋಪು ಬಳಸಿ ತೊಳೆಯಬೇಕು
ಜ್ವರ, ಫ್ಲೂ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಪಡೆದು ಔಷಧಿ ಸೇವಿಸಿ
ಶೀತ ಗಾಳಿ.. ಏನೆಲ್ಲಾ ಮಾಡಬಾರದು?
ತಣ್ಣಗಿನ ಪಾನೀಯ, ಐಸ್ ಕ್ರೀಮ್ ಸೇವಿಸಬಾರದು
ಫ್ರಿಡ್ಜ್ನಲ್ಲಿಟ್ಟ ನೀರನ್ನು ಯಾರೂ ಕುಡಿಯಬಾರದು
ವೀಕೆಂಡ್ ಟೂರ್, ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸಿ
ಹೆಚ್ಚಿನ ಮಸಾಲ ಇರೋ ಆಹಾರ & ಜಂಕ್ ಫುಡ್ ತಪ್ಪಿಸಿಬೇಸಿಗೆ
 
 ಆರಂಭದಲ್ಲೇ ಮಳೆ ಬರ್ತಿದೆಯೆಂದು ಎಂಜಾಯ್ ಮಾಡುವಂತಿಲ್ಲ.. ಮಳೆ ಬಂದ್ರೂ ಹೊರಗೆ ಹೋಗೋದು ಇಲ್ಲಾ ಚಳಿ ಇದ್ದರೂ ಟ್ರಿಪ್ ಪ್ಲಾನ್ ಮಾಡಿ ನಿರ್ಲಕ್ಷ ವಹಿಸಿ ನಿಮ್ಮ ಆರೋಗ್ಯವನ್ನು ಹಾಳು ಮಾಜಿಕೊಳ್ಳಬೇಡಿ . ನಿವೆಷ್ಟು ಕೇರ್ ಮಾಡ್ತಿರೋ ಅಷ್ಟು ನಿಮಗೇ ಒಳ್ಳೆಯದು.
 

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ರಾಜ್ಯದ ಯುವಕ ಯುವತಿಯರೇ ಇವರ ಟಾರ್ಗೆಟ್!