Publish Date: Fri, 14 Jul 2023 (20:20 IST)
Updated Date: Fri, 14 Jul 2023 (19:29 IST)
ಭೂ ಕಬಳಿಕೆದಾರರ ಕಾಟದಿಂದ ರೈತನೋರ್ವ ಆತ್ಮಹತ್ಯೆಗೆ ನಿರ್ಧಾರ ಕೈಗೊಂಡಿದ್ದಾರೆ. ಆನೇಕಲ್ನ ಮುಗುಳೂರು ನಿವಾಸಿ ಬಾಲಕೃಷ್ಣ ಆತ್ಮಹತ್ಯೆ ನಿರ್ಧಾರ ಮಾಡಿರುವ ರೈತ. ಮುಗುಳೂರಿನಲ್ಲಿರುವ ಬಾಲಕೃಷ್ಣನ ಒಂದು ಎಕರೆ 28 ಗುಂಟೆ ಜಮೀನಿನ ಮೇಲೆ ಖದೀಮರು ಕಣ್ಣಿಟ್ಟಿದ್ದಾರೆ.. ಖದೀಮರು ಕಳೆದ ವರ್ಷ ನಕಲಿ ಸೈನ್ ಬಳಸಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದನ್ನರಿತ ಬಾಲಕೃಷ್ಣ ರಿಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿಸಿದ್ದ. ಇದಕ್ಕೆ ಕಿಡಿಗೇಡಿಗಳು ಬಾಲಕೃಷ್ಣನಿಗೆ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬಾಲಕೃಷ್ಣ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.. ನಂತರ ಬಾಲಕೃಷ್ಣ ಎಸ್ಪಿ ಬಳಿ ತಮ್ಮ ಅಳಲನ್ನು ತೋಡಿಕೊಂಡಾಗ ಪೊಲೀಸರು ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ. ಮುಗುಳೂರಿನ ಶ್ರೀ ರಾಮಯ್ಯ, ಮುನಿರಾಜು ಹಾಗು ಆಲ್ಬರ್ ಅಭೀತ್ ಮೇಲೆ FIR ದಾಖಲಿಸಿದ್ದಾರೆ.. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತ ಬಾಲಕೃಷ್ಣ ಆಗ್ರಹಿಸಿದ್ದಾನೆ