Publish Date: Sun, 30 Oct 2022 (20:24 IST)
Updated Date: Sun, 30 Oct 2022 (20:29 IST)
ಜೋಳ ಒಕ್ಕಣೆ ಯಂತ್ರವನ್ನು ಸಾಗಾಣಿಕೆ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿರುವ ಘಟನೆ ಮೈಸೂರಿನ ಟಿ. ನರಸೀಪುರ ತಾಲ್ಲೂಕಿನ ಚಿಟಗಯ್ಯನಕೊಪ್ಪಲು ಗ್ರಾಮದ ಬಳಿ ನಡೆದಿದೆ. ಪ್ರಕಾಶ್(19), ಸಂತೋಷ್(29), ಮರೀಜೋಗಿ(44) ಮೃತ ದುರ್ದೈವಿಗಳಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ SP ಆರ್.ಚೇತನ್, ASP ನಂದಿನಿ, ನರಸೀಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಟಿ. ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.