Publish Date: Sun, 30 Oct 2022 (17:24 IST)
Updated Date: Sun, 30 Oct 2022 (17:27 IST)
ಅಪ್ಪು ಅಗಲಿ 1 ವರ್ಷವಾದ್ರೂ ಸಹ ನಟ ಪುನೀತ್ ರಾಜ್ಕುಮಾರ್ ಮೇಲಿನ ಅಭಿಮಾನ ಕರಗಿಲ್ಲ. ಅಪ್ಪು ನಮ್ಮನ್ನಗಲಿ ನಿನ್ನೆಗೆ ಒಂದು ವರ್ಷವಾಗಿದ್ದು, ಮೊದಲ ವರ್ಷದ ಪುಣ್ಯಸ್ಮರಣೆಯನ್ನು ಮಾಡಲಾಯಿತು. ದೊಡ್ಮನೆ ಮಂದಿ, ಅಭಿಮಾನಿಗಳು ಅಪ್ಪುವಿನ ಸ್ಮರಣೆ ಮಾಡಿದ್ರು. ಇಂದು ಕೂಡ ಅಪ್ಪು ಸಮಾಧಿ ಬಳಿ ಅಭಿಮಾನಿಗಳು ಆಗಮಿಸುತ್ತಿದ್ದು, ಅಪ್ಪುವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಪರಮಾತ್ಮನ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಫ್ಯಾನ್ಸ್ ಅಪ್ಪುವಿನ ದರ್ಶನ ಪಡೆಯುತ್ತಿದ್ದಾರೆ. ನಿನ್ನೆಯಿಂದಲೂ ಸಾಗರೋಪಾದಿಯಲ್ಲಿ ಜನರು ಬರ್ತಿದ್ದಾರೆ.