Publish Date: Sun, 30 Oct 2022 (17:08 IST)
Updated Date: Sun, 30 Oct 2022 (17:22 IST)
ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಿದೆ, ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ತೆಲಂಗಾಣ ಕಾಂಗ್ರೆಸ್ ನಾಯಕರು ರಾಹುಲ್ ಯಾತ್ರೆ ಆರಂಭಿಸಿದ್ದಾರೆ. ರಾಹುಲ್ ಕಲೆಗೆ ಬೆಲೆಕೊಡುವುದನ್ನು ಆರಂಭದಿಂದಲೂ ಬಳಸಿಕೊಂಡು ಬಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ಆಹಾರ ಸೇವಿಸಿ ತಮ್ಮ ನಡಿಗೆಯನ್ನು ಮುಂದುವರೆಸುತ್ತಿದ್ದಾರೆ. ಜೊತೆಗೆ ಆಯಾ ರಾಜ್ಯದಲ್ಲಿ ಸ್ಥಳೀಯ ನೃತ್ಯವನ್ನು ಅಲ್ಲಿನ ಕಲಾವಿದರೊಂದಿಗೆ ರಾಹುಲ್ ಮಾಡ್ತಿದ್ದು, ಜನ ಮನ ಸೆಳೆಯುತ್ತಿದೆ. ನಿನ್ನೆ ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ್ದ ರಾಹುಲ್, ಇಂದು ಬತುಕಮ್ಮ ನೃತ್ಯಕಲಾವಿದರೊಂದಿಗೆ ಬತುಕಮ್ಮ ನೃತ್ಯ ಮಾಡಿ ಸಂಭ್ರಮಿಸಿದ್ರು.