Daily Horoscope

Select Your Language

Notifications

webdunia
webdunia
webdunia
webdunia

ನಟಿ ವಿನಯ್ ಪ್ರಸಾದ್ ಮನೆಯಲ್ಲಿ ಕಳವು

Theft at actress Vinay Prasad's house
ಕನ್ನಡದ ಹಿರಿಯ ನಟಿ ವಿನಯ ಪ್ರಸಾದ್ ಮನೆಯೊಳಗೆ ನುಗ್ಗಿದ ಕಳ್ಳರು ಕೈಚಳಕ ತೋರಿಸಿದ್ದಾರೆ. ವಿನಯಪ್ರಸಾದ್​ ಅವರ ಬೆಂಗಳೂರಿನ ನಂದಿನಿ ಲೇಔಟ್​ನಲ್ಲಿರುವ ನಿವಾಸಕ್ಕೆ ಕಳೆದ ಅಕ್ಟೋಬರ್ 22ರಂದು ಮನೆ ಬೀಗ ಒಡೆದು ನುಗ್ಗಿರುವ ಕಳ್ಳರು ಲಾಕರ್​ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ಉಡುಪಿಗೆ ತೆರಳಿದ್ದ ನಟಿ ಮೊನ್ನೆ 26ರಂದು ಮನೆಗೆ ಹಿಂದಿರುಗಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನವಾಗಿರುವುದನ್ನು ಪತ್ತೆಯಾಗಿದೆ. ಕೂಡಲೇ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್​​​​​ 26ರ ಸಂಜೆ 4.30ಕ್ಕೆ ನಟಿ ಮನೆಗೆ ಹಿಂದಿರುಗಿದ್ದರು. ಮನೆಯ ಬಾಗಿಲಿನ ಬೀಗ ಒಡೆದು ಕಳ್ಳರು ಮನೆಯೊಳಗೆ ನುಗ್ಗಿ ಮನೆಯ ರೂಂನ ಲಾಕರ್​ನಲ್ಲಿಟ್ಟಿದ್ದ ನಗದನ್ನು ದೋಚಿದ್ದಾರೆ. ಏರಿಯಾದ ಹಳೇ ಕಳ್ಳರ ಗ್ಯಾಂಗ್, ಸುಲಿಗೆಕೋರರು ಹಾಗೂ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ನಂದಿನಿ ಲೇ ಔಟ್​​​ನ 4ನೇ ಹಂತದ ರೈಲ್ವೆ ಮೆನ್ಸ್ ಕಾಲೊನಿಯಲ್ಲಿ ವಿನಯ ಪ್ರಸಾದ್ ತಮ್ಮ ಪತಿ ಪ್ರಕಾಶ್ ಜೊತೆ ವಾಸವಾಗಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬತುಕಮ್ಮ ನೃತ್ಯ ಮಾಡಿದ ರಾಹುಲ್​​ ಗಾಂಧಿ