Select Your Language

Notifications

webdunia
webdunia
webdunia
webdunia

ಬೆಂಗಳೂರು ನಗರ DHO ‘ಲೋಕಾ’ ಬಲೆಗೆ

Bangalore City DHO 'Loka' trap
bangalore , ಭಾನುವಾರ, 30 ಅಕ್ಟೋಬರ್ 2022 (17:18 IST)
ಭ್ರಷ್ಟಾಚಾರ ತಡೆಯಲು ಲೋಕಾಯುಕ್ತ ಜಾರಿಗೆ ಬಂದಿದೆ. ಲಂಚ ಪಡೆಯುವುದನ್ನು ತಡೆಯಲು ಎಷ್ಟೇ ಪ್ರಯತ್ನಗಳಾದರೂ ಸಹ ಲಂಚಬಾಕರು ಲಂಚ ಸ್ವೀಕರಿಸುತ್ತಾನೆ ಇರ್ತಾರೆ.  ಇಲ್ಲೋರ್ವ ಲಂಚ ಸ್ವೀಕರಿಸುವ ವೇಳೆಗೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ. ಲಂಚ ಸ್ವೀಕರಿಸುವ ವೇಳೆ ಬೆಂಗಳೂರು ನಗರ DHO ಡಾ.ನಿರಂಜನ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಹೊಸ ಆಸ್ಪತ್ರೆಗೆ ಪರವಾನಗಿ ನೀಡುವ ಸಲುವಾಗಿ ಲಂಚದ ಬೇಡಿಕೆ ಇಟ್ಟಿದ್ದು, ಇದನ್ನು ಪಡೆಯುತ್ತಿರುವ ವೇಳೆಗೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಈತ 1.25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. 40 ಸಾವಿರ ಅಡ್ವಾನ್ಸ್ ತೆಗೆದುಕೊಳ್ಳುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾ.ನಿರಂಜನ್​​​ನನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ವಿನಯ್ ಪ್ರಸಾದ್ ಮನೆಯಲ್ಲಿ ಕಳವು