Publish Date: Wed, 29 Apr 2020 (16:33 IST)
Updated Date: Wed, 29 Apr 2020 (16:35 IST)
ಕೋವಿಡ್ -19 ತಡೆಗಟ್ಟುವ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಮದ್ಯಮಾರಾಟ ನಿಷೇಧಿಸಲಾಗಿದೆ.
ಆದರೆ ಕಳ್ಳಭಟ್ಟಿ ದಂಧೆ ಮಾತ್ರ ಎಗ್ಗಿಲ್ಲದೇ ಅಲ್ಲಲ್ಲಿ ಮುಂದುವರಿದಿದೆ.
ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್ ಕುಡಿದು ಸಾವನ್ನಪ್ಪುತ್ತಿರುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಕಳ್ಳಭಟ್ಟಿಯನ್ನು ಯಾವುದೇ ಅಳುಕಿಲ್ಲದೇ ತಯಾರು ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮಾರಲದಿನ್ನಿ ತಾಂಡಾದ ಮೇಲೆ ದಾಳಿ ನಡೆಸಿರೋ ಪೊಲೀಸರು ಅಂದಾಜು 2 ಸಾವಿರ ಲೀಟರ್ ನಷ್ಟು ಸಂಗ್ರಹಿಸಿ ಇಡಲಾಗಿದ್ದ ಕಳ್ಳಭಟ್ಟಿಯನ್ನು ಜಪ್ತಿ ಮಾಡಿ ನಾಶ ಮಾಡಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.