Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಇದ್ರೂ ಸೇಂದಿ, ಕಳ್ಳಭಟ್ಟಿ ಮಾರಾಟ ಭಲೇ ಜೋರು

ಲಾಕ್ ಡೌನ್ ಇದ್ರೂ ಸೇಂದಿ, ಕಳ್ಳಭಟ್ಟಿ ಮಾರಾಟ ಭಲೇ ಜೋರು
ಬೀದರ್ , ಶುಕ್ರವಾರ, 3 ಏಪ್ರಿಲ್ 2020 (19:41 IST)
ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದರೂ ಇಲ್ಲಿ ಮಾತ್ರ ಕಲಬೆರಕೆ ಸೇಂದಿ, ಕಳ್ಳಭಟ್ಟಿ ಅಕ್ರಮವಾಗಿ ಮಾರಾಟವಾಗುತ್ತಲೇ ಇದೆ.

ಬೀದರ ನಗರದ ವಡ್ಡರ ಕಾಲೋನಿಯಲ್ಲಿ ವಿವಿಧ ಕಡೆಗಳಲ್ಲಿ ಅಬಕಾರಿ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿ ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟಿದ 240 ಲೀಟರ್ ಕಲಬೆರಕೆ ಸೇಂದಿ ಹಾಗೂ 8 ಲೀಟರ್ ಕಳ್ಳಭಟ್ಟಿ ಸರಾಯಿ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರತ್ಯೇಕವಾಗಿ 3 ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳಾದ ಚಿನ್ನಯ್ಯ ತಂದೆ ತಿಮ್ಮಣ್ಣ, ಸುರೇಶ ತಂದೆ ಚಂದ್ರಪ್ಪ,  ನಾಗರಾಜ ತಂದೆ ನಾಗಪ್ಪ ಈ ಮೂರು ಆರೋಪಿಗಳು ದಾಳಿ ಸಮಯದಲ್ಲಿ ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೋಂ ಕ್ವಾರಟೈನ್‌ ನಲ್ಲಿರೋರು ಗಂಟೆಗೊಮ್ಮೆ ಸೆಲ್ಫಿ ಅಪಲೋಡ್ ಮಾಡ್ಲೇಬೇಕು