Select Your Language

Notifications

webdunia
webdunia
webdunia
webdunia

ಹೋಂ ಕ್ವಾರಟೈನ್‌ ನಲ್ಲಿರೋರು ಗಂಟೆಗೊಮ್ಮೆ ಸೆಲ್ಫಿ ಅಪಲೋಡ್ ಮಾಡ್ಲೇಬೇಕು

ಹೋಂ ಕ್ವಾರಟೈನ್‌ ನಲ್ಲಿರೋರು ಗಂಟೆಗೊಮ್ಮೆ ಸೆಲ್ಫಿ ಅಪಲೋಡ್ ಮಾಡ್ಲೇಬೇಕು
ರಾಮನಗರ , ಶುಕ್ರವಾರ, 3 ಏಪ್ರಿಲ್ 2020 (19:34 IST)
ಕೊರೋನಾ ವೈರಸ್ (ಕೋವಿಡ್-19) ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಹೋಂ ಕ್ವಾರಂಟೈನ್ ನಲ್ಲಿರೋರು ಇನ್ಮುಂದೆ ಸೆಲ್ಫಿ ಅಪಲೋಡ್ ಮಾಡ್ಲೇಬೇಕು.

ರಾಮನಗರ ಜಿಲ್ಲೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಟೈನ್‌ನಲ್ಲಿರುವವರಿಗೆ ಸೆಲ್ಫಿ ತೆಗೆದು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸೂಚನೆ ನೀಡಿದ್ದಾರೆ.

ಹೋಂ ಕ್ವಾರಟೈನ್‌ನಲ್ಲಿರಲು (ಗೃಹ ನಿರ್ಬಂಧನ) ಸೂಚಿಸಿರುವ ವ್ಯಕ್ತಿಗಳು ಕಡ್ಡಾಯವಾಗಿ ಪ್ರತಿ ಗಂಟೆಗೆ ಒಮ್ಮೆ ಸೆಲ್ಫಿ ತೆಗೆದು ಅದನ್ನು ಮೊಬೈಲ್ ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಆದರೆ ರಾತ್ರಿ 9 ರಿಂದ ಬೆಳಿಗ್ಗೆ 7 ಗಂಟೆಗೆಯವರೆಗಿನ ಅವಧಿಯನ್ನು ನಿದ್ರಾ ಅವಧಿಯೆಂದು ಪರಿಗಣಿಸಿದೆ. ಈ ಅವಧಿಯನ್ನು ಹೊರತು ಪಡಿಸಿ ಇನ್ನುಳಿದ ಅವಧಿಯಲ್ಲಿ ಪ್ರತಿ ಗಂಟೆಗೆ ಒಂದರಂತೆ ಒಟ್ಟು 14 ಸೆಲ್ಫಿಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರಣಕೇಕೆ - ರಾಜ್ಯದಲ್ಲಿ ಎಷ್ಟು ಜನರಲ್ಲಿದೆ ಕೋವಿಡ್ -19 ಸೋಂಕು?