Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ಪ್ರತಿಯೊಬ್ಬರಿಗೂ ನಿತ್ಯ 1 ಲೀಟರ್ ಉಚಿತ ಹಾಲು

ಕೊರೊನಾ ಎಫೆಕ್ಟ್ : ಪ್ರತಿಯೊಬ್ಬರಿಗೂ ನಿತ್ಯ 1 ಲೀಟರ್ ಉಚಿತ ಹಾಲು
ತುಮಕೂರು , ಶುಕ್ರವಾರ, 3 ಏಪ್ರಿಲ್ 2020 (14:38 IST)
ಕೊವೀಡ್ -19 ಅನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿರುವುದರಿಂದ 25 ಸಾವಿರ ಕುಟುಂಬಗಳಿಗೆ ಪ್ರತಿದಿನ ತಲಾ 1 ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿರುವ 11 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ  129 ಕೊಳಚೆ ಪ್ರದೇಶದ  25,000 ಕುಟಂಬಗಳಿಗೆ ತಲಾ  1 ಲೀ. ಹಾಲು ವಿತರಣೆ ಮಾಡಲಾಗುತ್ತಿದೆ. 

ಕೊಳಚೆ ಪ್ರದೇಶದಲ್ಲಿನ ಮನೆಗಳಿಗಳಿಗೆ ಸರ್ಕಾರದ ಆದೇಶದನ್ವಯ ಪ್ರತಿ ಮನೆಗೆ ಒಂದು ಲೀಟರ್‌‌ ಹಾಲನ್ನು  ತುಮೂಲ್ ಮೂಲಕ ಒದಗಿಸಲಾಗುತ್ತಿದ್ದು, ಹಾಲು ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ  ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ.   

ಈ ಅಧಿಕಾರಿಗಳು ಜಿಲ್ಲೆಯ ರೆಡ್ ಕ್ರಾಸ್, ಲಯನ್ಸ್  ಹಾಗು ರೋಟರಿ ಕ್ಲಬ್  ಹಾಗೂ  ಸ್ವಯಂ ಸೇವಕರ ಮೂಲಕ ಪ್ರತಿ ಕೊಳಚೆ ಪ್ರದೇಶದಲ್ಲಿನ ಮನೆಗಳಿಗೆ ತಲುಪಿಸಲಿದ್ದಾರೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಕೊರೊನಾ ಸೋಂಕಿತರು ಒಂದೇ ಕಡೆ ಶಿಫ್ಟ್