ಲಾಕ್ ಡೌನ್ ನಿಂದಾಗಿ ಪತ್ನಿ ಜತೆ ಸಮಯ ಕಳೆದೆ ಎಂದ ವಿರಾಟ್ ಕೊಹ್ಲಿ

ಶುಕ್ರವಾರ, 3 ಏಪ್ರಿಲ್ 2020 (09:49 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟಿಗರಿಗೆ ಇದುವರೆಗೆ ಸಿಗದ ಬಿಡುವಿನ ಸಮಯ ಈಗ ಸಿಕ್ಕಂತಾಗಿದೆ. ಇದನ್ನೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಜತೆಗಿನ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ.


ಲಾಕ್ ಡೌನ್ ನಿಂದಾಗಿ ನಮಗೆ ಒಳಿತೂ ಆಗಿದೆ. ಇದುವರೆಗೆ ನಾನು ನನ್ನ ಪತ್ನಿ ಅನುಷ್ಕಾ ಜತೆ ಕಳೆಯದಷ್ಟು ಸಮಯ ಈಗ ಕಳೆದಿರುವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

‘ಮದುವೆಯಾದ ಬಳಿಕ ನಾವು ಇಷ್ಟು ಕಾಲ ಜತೆಗೇ ಸಮಯ ಕಳೆದಿದ್ದೇ ಇರಲಿಲ್ಲ. ಈಗ ಅದಕ್ಕೆ ಅವಕಾಶ ಸಿಕ್ಕಿದೆ. ನಾವು ಮನೆಯಲ್ಲೇ ಇದ್ದೇವೆ. ಈ ಸಂದರ್ಭದಲ್ಲಿ ನಾವು ಸಕಾರಾತ್ಕಕವಾಗಿರಬೇಕು. ಧೈರ್ಯ ತಾಳಬೇಕು’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕ್ ಕ್ರಿಕೆಟಿಗ ಅಫ್ರಿದಿ ಚ್ಯಾರಿಟಿಗೆ ಬೆಂಬಲಿಸಿದ್ದನ್ನು ಸಮರ್ಥಿಸಿದ ಹರ್ಭಜನ್ ಸಿಂಗ್