ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತನ್ನ ಪಾಲಿಗೆ ಯಾವತ್ತೂ ಸರ್ವಶ್ರೇಷ್ಠ ನಾಯಕನೆಂದರೆ ಸೌರವ್ ಗಂಗೂಲಿ ಎಂದಿದ್ದಾರೆ.
									
										
								
																	
ಗಂಗೂಲಿ, ದ್ರಾವಿಡ್, ಧೋನಿ ಮತ್ತು ಕೊಹ್ಲಿ ನಾಯಕತ್ವದಲ್ಲಿ ಆಡಿದ್ದ ಯುವಿ ಈ ಪೈಕಿ ಗಂಗೂಲಿ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದ್ದಾರೆ. ಧೋನಿ ಮತ್ತು ಕೊಹ್ಲಿಯಿಂದ ಗಂಗೂಲಿಯಿಂದ ಸಿಕ್ಕ ಬೆಂಬಲ ಸಿಕ್ಕಿರಲಿಲ್ಲ ಎಂದಿದ್ದಾರೆ.
									
			
			 
 			
 
 			
			                     
							
							
			        							
								
																	ಸಂದರ್ಶನವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್ ‘ನಾನು ಗಂಗೂಲಿ, ಧೋನಿ, ಕೊಹ್ಲಿ ನಾಯಕತ್ವದಲ್ಲಿ ಆಡಿದ್ದೇನೆ. ಗಂಗೂಲಿ ಮತ್ತು ಧೋನಿ ನಡುವೆ ಹೋಲಿಕೆ ಮಾಡುವುದು ಕಷ್ಟ. ಆದರೆ ನನಗೆ ಗಂಗೂಲಿ ನೀಡಿದ ಬೆಂಬಲ ಧೋನಿ, ಕೊಹ್ಲಿಯಿಂದ ಸಿಗಲಿಲ್ಲ’ ಎಂದಿದ್ದಾರೆ.