ಮದ್ಯ ಸಿಗದೆ ಇಂದು ಒಂದೇ ದಿನ ಇಬ್ಬರು ಕುಡುಕರು ಆತ್ಮಹತ್ಯೆಗೆ ಶರಣು

ಶುಕ್ರವಾರ, 3 ಏಪ್ರಿಲ್ 2020 (11:31 IST)
ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯ ಸಿಗದೆ ಕುಡುಕರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇಂದು ಒಂದೇ ದಿನದಲ್ಲಿ ಇಬ್ಬರು ಕುಡುಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಣ್ಣೆ ಸಿಗಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕುಡುಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗೇ ದಾವಣಗೆರೆಯಲ್ಲಿ ಕುಡುಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ಈವರೆಗೆ ರಾಜ್ಯದಲ್ಲಿ 18 ಮಂದಿ ಕುಡುಕರು ಮದ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಲಾಕ್ ಡೌನ್ ನಿಂದ ಆಹಾರ ಸಿಗದೆ ಜನರು ಪರದಾಡುತ್ತಿದ್ದರೆ ಕುಡುಕರು ಮಾತ್ರ ಮದ್ಯಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಲುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿದಾಟಿದೆ- ಆರೋಗ್ಯ ಸಚಿವ ಹರ್ಷವರ್ಧನರಿಂದ ಶಾಕಿಂಗ್ ಸುದ್ದಿ